ಸಾರಾಂಶ
ಸಂಸತ್ ಭವನದ ಭದ್ರತಾ ಪಡೆಯ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ಅನುರಾಗ್ ಅಗರ್ವಾಲ್ ನೇಮಕಗೊಂಡಿದ್ದಾರೆ.
ನವದೆಹಲಿ: ಸಂಸತ್ ಭವನದ ಭದ್ರತಾ ವಿಭಾಗದ ಮುಖ್ಯಸ್ಥರಾಗಿ ಮೇಘಾಲಯ-ಅಸ್ಸಾಂ ಕೇಡರ್‌ನ 1998 ಬ್ಯಾಚ್ ಐಪಿಎಸ್ ಅಧಿಕಾರಿ ಅನುರಾಗ್ ಅಗರ್ವಾಲ್ ಅವರನ್ನು ನೇಮಕ ಮಾಡಲಾಗಿದೆ.
ಪ್ರಸ್ತುತ ಕೇಂದ್ರೀಯ ಮೀಸಲು ಭದ್ರತಾ ಪಡೆಯ ಇನ್ಸ್‌ಪೆಕ್ಟರ್ ಜನರಲ್ ಆಗಿದ್ದ ಅನುರಾಗ್ ಅಗರ್ವಾಲ್, ಇನ್ನು ಮುಂದೆ ಸಂಸತ್ ಭವನದ ಭದ್ರತಾ ಮೇಲುಸ್ತುವಾರಿಯನ್ನು ಮೂರು ವರ್ಷಗಳ ಕಾಲ ನೋಡಿಕೊಳ್ಳಲಿದ್ದಾರೆ.ಇದಕ್ಕೂ ಮೊದಲು ಭದ್ರತಾ ಮುಖ್ಯಸ್ಥರಾಗಿದ್ದ ರಘುಬೀರ್ ಲಾಲ್ ತಮ್ಮ ಕೇಡರ್‌ಗೆ ಮರಳಿದ ನಂತರ ಆ ಹುದ್ದೆಯು ಅ.20ರಿಂದ ಖಾಲಿ ಉಳಿದಿತ್ತು.