ಸಾರಾಂಶ
ಪಹಲ್ಗಾಂ ನರಮೇಧದ ಬಳಿಕ ಉಗ್ರವಾದ ನಿರ್ಮೂಲನೆಗೆ ಪಣ ತೊಟ್ಟಿರುವ ಭಾರತವು, ಭವಿಷ್ಯದಲ್ಲಿ ಯಾವುದೇ ಭಯೋತ್ಪಾದಕ ಕೃತ್ಯ ನಡೆದರೆ ಅದನ್ನು ದೇಶದ ವಿರುದ್ಧದ ಯುದ್ಧ ಕೃತ್ಯ ಎಂದು ಪರಿಗಣಿಸಿ ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುವ ನಿರ್ಧಾರಕ್ಕೆ ಬಂದಿದೆ
ನವದೆಹಲಿ : ಪಹಲ್ಗಾಂ ನರಮೇಧದ ಬಳಿಕ ಉಗ್ರವಾದ ನಿರ್ಮೂಲನೆಗೆ ಪಣ ತೊಟ್ಟಿರುವ ಭಾರತವು, ಭವಿಷ್ಯದಲ್ಲಿ ಯಾವುದೇ ಭಯೋತ್ಪಾದಕ ಕೃತ್ಯ ನಡೆದರೆ ಅದನ್ನು ದೇಶದ ವಿರುದ್ಧದ ಯುದ್ಧ ಕೃತ್ಯ ಎಂದು ಪರಿಗಣಿಸಿ ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುವ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ನಿರ್ಧಾರದ ಮೂಲಕ ಭಯೋತ್ಪಾದನೆ ವಿರುದ್ಧ ಕೆಂಪು ಗೆರೆ ಎಳೆಯಲು ನಿರ್ಧರಿಸಿದೆ ಮತ್ತು ಉಗ್ರರಿಗೆ, ಸಂಚುಕೋರರಿಗೆ ಕಠಿಣವಾಗಿ ಪ್ರತಿಕ್ರಿಯಿಸುವ ಮೂಲಕ ಭಯೋತ್ಪಾದಕ ಸಂಘಟನೆಗಳ ಜೊತೆಗೆ ನಂಟು ಹೊಂದಿರುವ ಪಾಕಿಸ್ತಾನಕ್ಕೆ ಕಠಿಣ ಸಂದೇಶ ನೀಡಲು ಮುಂದಾಗಿದೆ ಎಂದು ಮೂಲಗಳು ಹೇಳಿವೆ
ಯುದ್ಧ ಕೃತ್ಯ ಎಂದು ಉಗ್ರವಾದವನ್ನು ಪರಿಗಣಿಸಿದರೆ ಯುದ್ಧಾಪರಾಧ ಕಾಯ್ದೆಗಳ ಅಡಿ ಯಾವ ಶಿಕ್ಷೆಗಳನ್ನು ಅಪರಾಧಿಗಳಿಗೆ ನೀಡಲಾಗುತ್ತದೋ ಅಂಥದ್ದೇ ಶಿಕ್ಷೆಯನ್ನು ಉಗ್ರವಾದಕ್ಕೂ ನೀಡಲಾಗುತ್ತದೆ ಎಂದು ಅವು ಸ್ಪಷ್ಟಪಡಿಸಿವೆ.