ಸಾರಾಂಶ
ಮುಂಬೈ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ವಿವಾಹವಾಗುತ್ತಿದ್ದಾರೆ ಎಂಬ ವದಂತಿಗಳಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಅವಾರ್ಡ್ 2025ರ ವೇಳೆ ರಶ್ಮಿಕಾ ಮಂದಣ್ಣ ಕಾರ್‌ನಲ್ಲಿ ಕುಳಿತು ಅಭಿಮಾನಿಗಳತ್ತ ಕೈಬೀಸಿದ್ದಾರೆ. ಈ ವೇಳೆ ಅವರು ತೊಟ್ಟಿದ್ದ ವಜ್ರದ ಉಂಗುರ ಗಮನ ಸೆಳೆದಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮತ್ತು ದೇವರಕೊಂಡ ಹಲವೆಡೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಪ್ರೀತಿಯಲ್ಲಿದ್ದಾರೆ ಎಂಬ ಗುಸುಗುಸು ಇದೆ.
==ಮಧುಚಂದ್ರ ಮರ್ಡರ್; ಸೋನಂ ಎದುರೇ ಪತಿ ಹತ್ಯೆ; ಆರೋಪಪಟ್ಟಿ
ಇಂದೋರ್: ಮದುವೆಯಾಗಿ ಮಧುಚಂದ್ರಕೆಂದು ಮೇಘಾಲಯಕ್ಕೆ ತೆರಳಿದಾಕೆ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯ ಕೊಲೆ ಮಾಡಿಸಿ ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದ್ದ ಘಟನೆ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ 790 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ಅದರಲ್ಲಿ ಪತ್ನಿ ಸೋನಂ ಸಮ್ಮುಖದಲ್ಲೇ ಆಕೆಯಪತಿ ರಾಜಾ ರಘುವಂಶಿ ಹತ್ಯೆ ನಡೆದಿತ್ತು ಎಂದು ಉಲ್ಲೇಖಿಸಲಾಗಿದೆ. ಮೊದಮೊದಲು ನವವಿವಾಹಿತ ರಾಜಾ ಕಾಣೆಯಾಗಿದ್ದಾರೆ ಎನ್ನಲಾಗಿತ್ತು. ಬಳಿಕ ರಾಜ್ ಕುಶ್ವಾಹಾ ಎಂಬಾತನ ಜತೆಗೆ ಸಂಬಂಧ ಹೊಂದಿದ್ದ ಸೋನಂಳ ಅಣತಿಯಂತೆ ಆಕಾಶ್ ಸಿಂಗ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್ ಮತ್ತು ಆನಂದ್ ಕುರ್ಮಿ ಸೇರಿಕೊಂಡು ರಾಜಾರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು ಎಂಬುದು ಎಸ್‌ಐಟಿ ತನಿಖೆಯಿಂದ ಬಯಲಾಗಿತ್ತು. ಈ ಸಂಬಂಧ ಐವರನ್ನು ಬಂಧಿಸಲಾಗಿತ್ತು.
==ಅಮಿಟಿ ವಿವಿ ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದ 60 ಬಾರಿ ಕಪಾಳಮೋಕ್ಷ
ಲಖನೌ: ಇಲ್ಲಿನ ಅಮಿಟಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಸಹಪಾಠಿಯನ್ನು ಕಾರಿನಲ್ಲಿ ಕೂರಿಸಿ, ಅಮಾನುಷವಾಗಿ ಕಪಾಳಕ್ಕೆ ಥಳಿಸಿದ ಘಟನೆ ನಡೆದಿದೆ. ಘಟನೆ ಸಂಬಂಧ ವಿದ್ಯಾರ್ಥಿಯ ತಂದೆ ದೂರಿತ್ತಿದ್ದು, ಥಳಿಸಿದವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಶಿಖರ್ ಎಂಬ ವಿದ್ಯಾರ್ಥಿ ಕಾಲಿನ ಸಮಸ್ಯೆ ಹಿನ್ನೆಲೆಯಲ್ಲಿ ಕಾರಿನಲ್ಲಿ ಕಾಲೇಜಿಗೆ ಬಂದಿದ್ದ. ಈ ವೇಳೆ ಜಾಹ್ನವಿ ಮಿಶ್ರ ಮತ್ತು ಆಯುಬ್ ಯಾದವ್ ಸೇರಿ ಒಂದಷ್ಟು ವಿದ್ಯಾರ್ಥಿಗಳು ಮಾತನಾಡಬೇಕು ಎಂದು ಕಾರು ಏರಿ, 50-60 ಬಾರಿ ಕಪಾಳಕ್ಕೆ ಥಳಿಸಿದ್ದಾರೆ. ಜೊತೆಗೆ ಜೀವ ಬೆದರಿಕೆ ಹಾಕಿದ್ದಾರೆ. ಆದರೆ ಹಲ್ಲೆ ಮಾಡಿದ್ದು ಯಾಕೆ ಎಂಬ ವಿಷಯ ಬೆಳಕಿಗೆ ಬಂದಿಲ್ಲ.
==ಕೆಂಪುಕೋಟೆ ಆವರಣದಿಂದ ₹1 ಕೋಟಿ ಮೌಲ್ಯದ ಚಿನ್ನದ ಕಳಶ ದರೋಡೆ
ನವದೆಹಲಿ: ಇಲ್ಲಿಯ ಕೆಂಪು ಕೋಟೆ ಆವರಣದಲ್ಲಿ ಇತ್ತೀಚೆಗೆ ನಡೆದ ಜೈನ ಧರ್ಮದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ 2 ಬಂಗಾರದ ಕಳಶ ಸೇರಿ 1.5 ಕೋಟಿ ಮೌಲ್ಯದ ಅಮೂಲ್ಯ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಕೆಂಪು ಕೋಟೆಯಲ್ಲಿ ವ್ಯಾಪ್ತಿಯಲ್ಲಿನ ಆಗಸ್ಟ್ 15ರ ಉದ್ಯಾನದಲ್ಲಿ 10 ದಿನಗಳ ‘ದಶಲಕ್ಷಣ ಮಹಾಪರ್ವ’ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸುಧೀರ್ ಜೈನ್ ಎಂಬುವವರು ನಿತ್ಯವೂ ಬೆಲೆಬಾಳುವ ಚಿನ್ನದ ವಸ್ತುಗಳನ್ನು ಪೂಜೆಗಾಗಿ ತರುತ್ತಿದ್ದರು. ಈ ನಡುವೆ ಬುಧವಾರ ವ್ಯಕ್ತಿಯೊಬ್ಬ ಜೈನಮುನಿಯ ಸೋಗಿನಲ್ಲಿ ಆಗಮಿಸಿ ಕಳ್ಳತನ ಮಾಡಿದ್ದು ಸಿಸಿಟೀವಿಯಲ್ಲಿ ಸೆರೆಯಾಗಿದೆ.
)
)


;Resize=(128,128))
;Resize=(128,128))
;Resize=(128,128))