ಸಾರಾಂಶ
‘ನಾನು ಭಾವನಾತ್ಮಕ ವ್ಯಕ್ತಿ. ಎಲ್ಲಾ ಕಡೆಯೂ ಸರಳವಾಗಿ, ಆತ್ಮೀಯವಾಗಿ ಇರುತ್ತೇನೆ. ಆದರೆ ಇದನ್ನು ಫೇಕ್, ಕ್ಯಾಮರಾ ಎದುರು ನಟನೆ ಮಾಡ್ತಾಳೆ ಅಂತೆಲ್ಲ ಟೀಕೆ ಮಾಡುತ್ತಾರೆ.
ಸಿನಿವಾರ್ತೆ
‘ನಾನು ಭಾವನಾತ್ಮಕ ವ್ಯಕ್ತಿ. ಎಲ್ಲಾ ಕಡೆಯೂ ಸರಳವಾಗಿ, ಆತ್ಮೀಯವಾಗಿ ಇರುತ್ತೇನೆ. ಆದರೆ ಇದನ್ನು ಫೇಕ್, ಕ್ಯಾಮರಾ ಎದುರು ನಟನೆ ಮಾಡ್ತಾಳೆ ಅಂತೆಲ್ಲ ಟೀಕೆ ಮಾಡುತ್ತಾರೆ. ಈ ಹಿಂದೆ ಹಣ ಕೊಟ್ಟು ನನ್ನ ಬಗ್ಗೆ ಟ್ರೋಲ್ ಮಾಡಿಸಿದ್ದರು, ನೆಗೆಟಿವ್ ಸುದ್ದಿ ಹರಡಿದ್ದರು’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
‘ಈ ಕಾಲದಲ್ಲಿ ಆತ್ಮೀಯತೆಯನ್ನು ದೌರ್ಬಲ್ಯ ಎಂದು ಪರಿಗಣಿಸುತ್ತಾರೆ. ದೊಡ್ಡ ದೊಡ್ಡಸಿನಿಮಾಮಾಡಿದರೂ ನಾನು ಸ್ಟಾರ್‌ಗಿರಿಯನ್ನು ತಲೆಗೇರಿಸಿಕೊಂಡಿಲ್ಲ. ಇನ್ನೊಬ್ಬರು ಬೆಳೆಯುತ್ತಿದ್ದರೆ ನಾವೂ ಅವರಿಂದ ಸ್ಫೂರ್ತಿ ಪಡೆದು ಬೆಳೆಯಬೇಕೇ ವಿನಃ ನೋವು ಕೊಡುವ, ಗೇಲಿ ಮಾಡಿ ನಗುವ ಕ್ರೌರ್ಯ ತೋರಬಾರದು’ ಎಂದೂ ರಶ್ಮಿಕಾ ಹೇಳಿದ್ದಾರೆ.