ಸಾರಾಂಶ
ಬಿಹಾರದ ಆರಾದ ಗೋಪಾಲಿ ಚೌಕ್‌ನಲ್ಲಿರುವ ತನಿಷ್ಕ್ ಶೋ ರೂಂಗೆ ಸೋಮವಾರ ಮುಸುಕುಧಾರಿಗಳ ಗುಂಪೊಂದು ನುಗ್ಗಿ ಹಗಲು ದರೋಡೆ ನಡೆಸಿದ್ದು, ₹25 ಕೋಟಿ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ನಗದನ್ನು ಕೂಡ ಹೊತ್ತೊಯ್ದಿದ್ದು, ಅದರ ವಿವರ ಲಭಿಸಿಲ್ಲ.
ಆರಾ (ಬಿಹಾರ): ಬಿಹಾರದ ಆರಾದ ಗೋಪಾಲಿ ಚೌಕ್‌ನಲ್ಲಿರುವ ತನಿಷ್ಕ್ ಶೋ ರೂಂಗೆ ಸೋಮವಾರ ಮುಸುಕುಧಾರಿಗಳ ಗುಂಪೊಂದು ನುಗ್ಗಿ ಹಗಲು ದರೋಡೆ ನಡೆಸಿದ್ದು, ₹25 ಕೋಟಿ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ನಗದನ್ನು ಕೂಡ ಹೊತ್ತೊಯ್ದಿದ್ದು, ಅದರ ವಿವರ ಲಭಿಸಿಲ್ಲ.
ಸೋಮವಾರ ಬೆಳಿಗ್ಗೆ 10:30 ಕ್ಕೆ ಶೋ ರೂಂ ತೆರೆದ ಸ್ವಲ್ಪ ಸಮಯದ ನಂತರ, 5-6 ಜನರು ಅಂಗಡಿಯೊಳಗೆ ನುಗ್ಗಿ, ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಅಲ್ಲದೆ ಗ್ರಾಹಕರು ಮತ್ತು ಸಿಬ್ಬಂದಿಗೆ ಕೈ ಎತ್ತುವಂತೆ ಆದೇಶಿಸಿ, ಕದ್ದ ವಸ್ತುಗಳನ್ನು ಕ್ರಮಬದ್ಧವಾಗಿ ಚೀಲಗಳಲ್ಲಿ ಪ್ಯಾಕ್ ಮಾಡಿ ದರೋಡೆ ಮಾಡಿದ್ದಾರೆ. ಸಿಬ್ಬಂದಿ ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಕೌಂಟರ್‌ಗಳ ಹಿಂದೆ ಅಡಗಿಕೊಂಡಿದ್ದಾರೆ.ಈ ನಡುವೆ ಡಕಾಯಿತರನ್ನು ನಂತರ ನಾಕಾಬಂದಿ ನಡೆಸಿ ಬಂಧಿಸಲು ನಡೆಸಿದ ಯತ್ನ ವಿಫಲಗೊಂಡಿದೆ. ಪೊಲೀಸರು ಅವರನ್ನು ಅತಿ ವೇಗದಲ್ಲಿ ಚೇಸ್ ಮಾಡಿದಾಗ ಪೊಲೀಸರ ಮೇಲೇ ಅವರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.