‘ಡಾ. ಬಿ.ಆರ್‌. ಅಂಬೇಡ್ಕರ್‌ರ ಅಖಂಡ ಭಾರತದ ಸಿದ್ಧಾಂತಕ್ಕೆ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ವಿರುದ್ಧವಾಗಿತ್ತು ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಹೇಳಿದ್ದಾರೆ.

 ನಾಗ್ಪುರ: ‘ಡಾ. ಬಿ.ಆರ್‌. ಅಂಬೇಡ್ಕರ್‌ರ ಅಖಂಡ ಭಾರತದ ಸಿದ್ಧಾಂತಕ್ಕೆ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ವಿರುದ್ಧವಾಗಿತ್ತು. ಅವರ ಈ ನಿಲುವೇ ಸುಪ್ರೀಂಕೋರ್ಟ್‌ 370ನೇ ವಿಧಿ ರದ್ದು ಮಾಡಿದ ಕೇಂದ್ರ ಸರ್ಕಾರದ ನಿಲುವನ್ನು ಎತ್ತಿಹಿಡಿಯಲು ಪ್ರೇರೇಪಣೆಯಾಗಿತ್ತು’ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಹೇಳಿದ್ದಾರೆ.

ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಜೆಐ ಗವಾಯಿ, ‘ಇಡೀ ದೇಶವನ್ನು ಒಂದಾಗಿ ಇಡುವ ಕಾರಣಕ್ಕಾಗಿಯೇ ಡಾ. ಅಂಬೇಡ್ಕರ್‌ ಅವರು ಒಂದು ಸಂವಿಧಾನವನ್ನು ರಚಿಸಿದ್ದರು. ಅವರು ಎಂದಿಗೂ ರಾಜ್ಯವೊಂದಕ್ಕೆ ಪ್ರತ್ಯೇಕ ಸಂವಿಧಾನದ ಪರವಾಗಿ ಇರಲಿಲ್ಲ. ಅವರ ಈ ನಿಲುವೇ ಸುಪ್ರೀಂಕೋರ್ಟ್‌, 370ನೇ ವಿಧಿ ರದ್ದು ಆದೇಶವನ್ನು ಎತ್ತಿಹಿಡಿಯಲು ಪ್ರೇರೇಪಣೆ ನೀಡಿತ್ತು’ ಎಂದು ಹೇಳಿದ್ದಾರೆ.

 370ನೇ ವಿಧಿ ರದ್ದು ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠದಲ್ಲಿ ನ್ಯಾ. ಗವಾಯಿ ಕೂಡ ಭಾಗವಾಗಿದ್ದರು.