ಸಾರಾಂಶ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಶ್ವಾಸಮತ ಮಂಡಿಸಿದ್ದು, ಶನಿವಾರ ಚರ್ಚೆ ನಡೆಯಲಿದೆ.
ನವದೆಹಲಿ: ದೆಹಲಿ ಸರ್ಕಾರ ಶೀಘ್ರದಲ್ಲೇ ಬಿದ್ದು ಹೋಗಲಿದೆ ಎಂಬ ವದಂತಿಗಳ ನಡುವೆಯೇ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವಿಶ್ವಾಸಮತ ನಿರ್ಣಯ ಮಂಡಿಸಿದ್ದಾರೆ. ಇದರ ಚರ್ಚೆ ಶನಿವಾರ ನಡೆಯಲಿದೆ.
ಶುಕ್ರವಾರ ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆಯ ಸಮಯದಲ್ಲಿ ಮಾತನಾಡಿದ ಕೇಜ್ರಿವಾಲ್ ‘ಪಕ್ಷದ ಇಬ್ಬರು ಶಾಸಕರು ನನ್ನ ಬಳಿ ಬಂದು, ‘ನಾವಿಬ್ಬರು ಬಿಜೆಪಿಯ ಸಂಪರ್ಕದಲ್ಲಿದ್ದೆವು.
ಅವರು ನಮಗೆ ತಲಾ 25 ಕೋಟಿ ರು. ನೀಡುವುದಾಗಿ ಬಿಜೆಪಿ ಹೇಳಿದೆ’ ಎಂದು ನನ್ನೆದುರು ಹೇಳಿದರು. ಅಲ್ಲದೇ ಕೇಜ್ರಿವಾಲ್ ಶೀಘ್ರವೇ ಬಂಧನಕ್ಕೊಳಪಡಲಿದ್ದಾರೆ. ದೆಹಲಿ ಸರ್ಕಾರ ಬಿದ್ದು ಹೋಗಲಿದೆ ಎಂದೂ ಹೇಳಿದರು’ ಎಂದರು.
ದೆಹಲಿ ಅಬಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಈಗಾಗಲೇ ಕೇಜ್ರಿವಾಲ್‌ಗೆ 6 ಬಾರಿ ಸಮನ್ಸ್ ನೀಡಿದೆ. ಅಲ್ಲದೇ ಫೆ.17ರೊಳಗೆ ವಿಚಾರಣೆಗೆ ಹಾಜರಾಗಬೇಕು ಎಂದು ದೆಹಲಿ ಕೋರ್ಟ್ ಸಹ ಕೇಜ್ರಿವಾಲ್ ಅವರಿಗೆ ಸೂಚಿಸಿದೆ.