ಸಾರಾಂಶ
84560 ಕೋಟಿ ಮೊತ್ತದ ಯುದ್ಧ ಸಾಮಗ್ರಿ ಖರೀದಿಗೆ ಕೇಂದ್ರ ಸರ್ಕಾರ ಅಸ್ತು ನೀಡಿದೆ. ಆಗಸದಲ್ಲೇ ಇಂಧನ ಭರ್ತಿ ವಿಮಾನ, ಟಾರ್ಪೆಡೋ ಸೇರಿ ಹಲವು ಸಾಧನ ಖರೀದಿ ಮಾಡಲಾಗಿದೆ.
ನವದೆಹಲಿ: ಕರಾವಳಿ ನಿಗಾ ವಿಮಾನ ಸೇರಿದಂತೆ ಸೇನೆಗೆ ಬೇಕಾದ ಉಪಕರಣಗಳ ಖರೀದಿಯ 84560 ಕೋಟಿ ರು. ಮೊತ್ತದ ಯೋಜನೆಗಳಿಗೆ ರಕ್ಷಣಾ ಸಚಿವಾಲಯ ತನ್ನ ಅನುಮೋದನೆ ನೀಡಿದೆ.
ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿ ಅನುಮೋದನೆ ನೀಡಿದೆ.
ಅನುಮೋದನೆ ಪಡೆಯಲ್ಪಟ್ಟ ಯೋಜನೆಗಳೆಂದರೆ ಹೊಸ ತಲೆಮಾರಿನ ಆ್ಯಂಟಿ ಟ್ಯಾಂಕ್ ಮೈನ್ಸ್, ವಾಯುರಕ್ಷಣಾ ನಿಯಂತ್ರಣಾ ರಾಡಾರ್, ಭಾರೀ ಸಾಮರ್ಥ್ಯದ ಟಾರ್ಪೆಡೋ, ಮಧ್ಯಮ ದೂರದ ಕರಾವಳಿ ನಿಗಾ ಮತ್ತು ಬಹು ಉದ್ದೇಶಿತ ಕರಾವಳಿ ನಿಗಾ ವಿಮಾನಗಳು, ವಿಮಾನಗಳಿಗೆ ಆಗಸದಲ್ಲೇ ಇಂಧನ ಭರ್ತಿ ಮಾಡಬಲ್ಲ ವಿಮಾನಗಳ ಖರೀದಿಗಳಾಗಿವೆ.