ಅಬಕಾರಿ ಹಗರಣದಲ್ಲಿಕೇಜ್ರಿವಾಲ್‌ಗೆ 14 ದಿನ ನ್ಯಾಯಾಂಗ ಬಂಧನ

| Published : Jun 30 2024, 12:56 AM IST / Updated: Jun 30 2024, 05:48 AM IST

Sunita Kejriwal
ಅಬಕಾರಿ ಹಗರಣದಲ್ಲಿಕೇಜ್ರಿವಾಲ್‌ಗೆ 14 ದಿನ ನ್ಯಾಯಾಂಗ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

: ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಕೋರ್ಟ್‌ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ನವದೆಹಲಿ: ದಿಲ್ಲಿ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ದೆಹಲಿ ಕೋರ್ಟ್‌ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

 ಶನಿವಾರ ಸಿಬಿಐ 14 ದಿನಗಳ ಕಾಲ ಕಸ್ಟಡಿಗೆ ನೀಡಿ ಎಂದು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ಕೋರ್ಟ್‌ ಕೇಜ್ರಿವಾಲ್‌ ಅವರನ್ನು ಜು.12ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕಸ್ಟಡಿ ವಿಚಾರಣೆ ವೇಳೆ ಅರವಿಂದ್ ಕೇಜ್ರಿವಾಲ್ ಸಹಕರಿಸಲಿಲ್ಲ ಎಂದು ಸಿಬಿಐ ತನ್ನ ರಿಮಾಂಡ್ ಅರ್ಜಿಯಲ್ಲಿ ಹೇಳಿಕೊಂಡಿದೆ. ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ ದಾಖಲೆಯಲ್ಲಿರುವ ಸಾಕ್ಷ್ಯಗಳಿಗೆ ವಿರುದ್ಧವಾದ ಉತ್ತರಗಳನ್ನು ನೀಡುತ್ತಿದ್ದು, ಪ್ರಕರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿಬಿಐ ಕೋರ್ಟ್‌ಗೆ ತಿಳಿಸಿದೆ.

ಸೋಲಾರ್‌ ಯೋಜನೆಯಲ್ಲಿ ಚೀನಾ ಸಹಾಯ ಕೋರಿದ ಅದಾನಿ: ಕಾಂಗ್ರೆಸ್‌ ಆರೋಪ

ನವದೆಹಲಿ: ಅದಾನಿ ಗ್ರೂಪ್ ತನ್ನ ಸೋಲಾರ್‌ ಯೋಜನೆಗೆ ಸಹಾಯ ಮಾಡಲು ಎಂಟು ಚೀನಿ ಕಂಪನಿಗಳನ್ನು ಆಯ್ಕೆ ಮಾಡಿದೆ ಎಂಬ ಪತ್ರಿಕಾ ವರದಿಯ ಕುರಿತು ಕಾಂಗ್ರೆಸ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಭಾರತವನ್ನು ಚೀನಾ ಮೇಲೆ ಅವಲಂಬಿತರಾಗಲು ಈ ರೀತಿ ಕುತಂತ್ರ ಮಾಡುತ್ತಿದ್ದಾರೆ. ತೆರಿಗೆದಾರರ ಹಣವು ಚೀನಿ ಕಂಪನಿಗಳಿಗೆ ಲಾಭವಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರವನ್ನು ಎಚ್ಚರಿಸಿದೆ.

ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಪ್ರಧಾನಿ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘ಭಾರತದ ಗಡಿಯನ್ನು ಯಾರೂ ಪ್ರವೇಶಿಸುವುದಿಲ್ಲ, ಆಕ್ರಮಿಸಿಕೊಳ್ಳುವುದಿಲ್ಲ ಎಂದು ಹೇಳಿರುವ ಮೋದಿ ಅವರು ಇಂದು ತನ್ನ ಸ್ನೇಹಿತನಿಗೆ(ಅದಾನಿ) ಸಹಾಯ ಮಾಡಲು ಚೀನಾದ 8 ಕಂಪನಿಯ 30 ಕಾರ್ಮಿಕರಿಗೆ ಉದಾರವಾಗಿ ವೀಸಾಗಳನ್ನು ನೀಡಲು ಮುಂದಾಗಿದ್ದಾರೆ.’ ಎಂದು ಆರೋಪಿಸಿದ್ದಾರೆ.