ಸಾರಾಂಶ
ಉಚಿತ ಕೊಡುಗೆಗಳು ಆರ್ಥಿಕತೆಗೆ ಕ್ಯಾನ್ಸರ್ ರೀತಿ ಹಾನಿಕಾರಕಗಳಾಗಿವೆ ಸ್ವದೇಶಿ ಜಾಗರಣ ಮಂಚ್‌ನ ಉಪ ಸಂಚಾಲಕ ತಿಳಿಸಿದ್ದಾರೆ.
ನವದೆಹಲಿ: ವಿವಿಧ ರಾಜ್ಯಗಳು ತಮ್ಮ ನಾಗರಿಕರಿಗೆ ನೀಡುತ್ತಿರುವ ಉಚಿತ ಕೊಡುಗೆಗಳು ಭಾರತೀಯ ಆರ್ಥಿಕತೆಯನ್ನು ಕ್ಯಾನ್ಸರ್ ರೀತಿ ಆಪೋಷನ ತೆಗೆದುಕೊಳ್ಳುತ್ತವೆ ಎಂದು ಸ್ವದೇಶಿ ಜಾಗರಣ ಮಂಚ್‌ನ ಉಪ ಸಂಚಾಲಕ ಅಶ್ವನಿ ಮಹಾಜನ್ ಎಚ್ಚರಿಸಿದ್ದಾರೆ.
ಸಂದರ್ಶನವೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಮಹಾಜನ್, ‘ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ರೀತಿ ಆರ್ಥಿಕ ಶಿಸ್ತು ರೂಢಿಸಿಕೊಳ್ಳಬೇಕು.ಕೇಂದ್ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಅಭಿವೃದ್ಧಿಗೆಂದು ನೀಡಲಾಗುವ ಹಣವನ್ನು ಉಚಿತ ಯೋಜನೆಗಳಿಗೆ ವ್ಯಯ ಮಾಡಿ ದೇಶವನ್ನು ಸಾಲದ ಕೂಪಕ್ಕೆ ತಳ್ಳುತ್ತಿವೆ. ಇದು ದೇಶದ ಆರ್ಥಿಕತೆಗೆ ಕ್ಯಾನ್ಸರ್‌ನಂತೆ ಹಬ್ಬುವ ಅಪಾಯವಿದ್ದು, ಕೂಡಲೇ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು’ ಎಂದು ತಿಳಿಸಿದರು.