ಸಾರಾಂಶ
ಭೋಪಾಲ್: ‘ಮದ್ಯವ್ಯಸನಿ ಗಂಡಸರಿಗೆ ಮನೆಯಲ್ಲೇ ಕುಡಿಯಲು ಹೇಳಿ. ಆಗ ಪರಿವಾರದೆದುರು ಕುಡಿಯಲು ಹಿಂಜರಿಯುವ ಅವರು ಕ್ರಮೇಣ ಅಭ್ಯಾಸವನ್ನೇ ಬಿಟ್ಟುಬಿಡುತ್ತಾರೆ’ ಎಂದು ಮಧ್ಯಪ್ರದೇಶದ ಸಚಿವ ನಾರಾಯಣ್ ಸಿಂಗ್ ಕುಶ್ವಾಹ ಮಹಿಳೆಯರಿಗೆ ಸಲಹೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.
ವ್ಯಸನಮುಕ್ತಿ ಅಭಿಯಾನಯನದಲ್ಲಿ ಅವರು ಕೊಟ್ಟ ಹೇಳಿಕೆಗೆ ಕಾಂಗ್ರೆಸ್ ನಾಯಕಿ ಸಂಗೀತಾ ಶರ್ಮಾ ಪ್ರತಿಕ್ರಿಯಿಸಿದ್ದು, ‘ಕೌಟುಂಬಿಕ ಹಿಂಸೆಗೆ ಕುಡಿತವೇ ಮುಖ್ಯ ಕಾರಣ. ಮದ್ಯವ್ಯಸನಿಗಳಿಂದ ಆದ ಪಾರಿವಾರಿಕ ಹಿಂಸೆಯ 17,000 ಪ್ರಕರಣಗಳು ಮಧ್ಯಪ್ರದೇಶದ ಮಹಿಳಾ ಆಯೋಗದಲ್ಲಿ ದಾಖಲಾಗಿದೆ. ಸಚಿವರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ನಾಲ್ವರು ಕಾರ್ಮಿಕರ ಸಾವು
ವಿದುರನಗರ: ತಮಿಳುನಾಡಿನ ವಿರುಧ್‌ನಗರ ಜಿಲ್ಲೆ ಸಮೀಪದಲ್ಲಿರುವ ಪಟಾಕಿ ಕಾರ್ಖಾನೆಯೊಂದರಲ್ಲಿ ಶನಿವಾರ ಸ್ಫೋಟ ಸಂಭವಿಸಿದ್ದು ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಫೋಟದಿಂದ ಪಟಾಕಿ ಸಾಮಾಗ್ರಿಗಳನ್ನು ದಾಸ್ತಾನು ಮಾಡಲು ಬಳಸುತ್ತಿದ್ದ ಅಕ್ಕಪಕ್ಕದ ಕಟ್ಟಡಗಳು ಹಾನಿಯಾಗಿವೆ. ಪ್ರಮುಖವಾಗಿ ಕಾರ್ಖಾನೆಯಲ್ಲಿ ಪಟಾಕಿ ತಯಾರಿಸಲು ಬಳಸುವ ರಾಸಾಯನಿಕ ಪದಾರ್ಥಗಳು, ಕಚ್ಚಾ ಸಾಮಗ್ರಿಗಳ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.