ಸಾರಾಂಶ
ಮೊದಲ ಪತ್ನಿ/ ಪತಿಗೆ ವಿಚ್ಛೇದನ ನೀಡದೇ ಎರಡನೇ ವಿವಾಹವಾದರೆ ಗರಿಷ್ಠ 7 ವರ್ಷ ಶಿಕ್ಷೆ ನೀಡುವ ಕಾನೂನು ಜಾರಿಗೆ ಅಸ್ಸಾಂನ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಈ ಕುರಿತ ಕರಡು ಮಸೂದೆಗೆ ಭಾನುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಗುವಾಹಟಿ: ಮೊದಲ ಪತ್ನಿ/ ಪತಿಗೆ ವಿಚ್ಛೇದನ ನೀಡದೇ ಎರಡನೇ ವಿವಾಹವಾದರೆ ಗರಿಷ್ಠ 7 ವರ್ಷ ಶಿಕ್ಷೆ ನೀಡುವ ಕಾನೂನು ಜಾರಿಗೆ ಅಸ್ಸಾಂನ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಈ ಕುರಿತ ಕರಡು ಮಸೂದೆಗೆ ಭಾನುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಲವ್ ಜಿಹಾದ್ ನಿಷೇಧಿಸುವ ಕಾಯ್ದೆ ಜಾರಿಯ ಘೋಷಣೆ ಮತ್ತು ಈ ಹಿಂದೆ ಬಾಲ್ಯವಿವಾಹ ಪಿಡುಗಿಗೆ ಕಡಿವಾಣ ಹಾಕಿದ ಬೆನ್ನಲ್ಲೇ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ.
ಮಾಹಿತಿ ನೀಡಿರುವ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ
ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ರಾಜ್ಯದಲ್ಲಿ ಬಹುಪತ್ನಿತ್ವ ನಿಷೇಧಿಸುವ ಕಾನೂನು ಜಾರಿಗೆ ನಿರ್ಧರಿಸಲಾಗಿದೆ. ಈ ನಿಯಮ ಯಾವುದೇ ಧರ್ಮದವರಿಗಾದರೂ ಅನ್ವಯವಾಗುತ್ತದೆ. ಈ ಕಾಯ್ದೆ ಅನ್ವಯ ಮೊದಲ ಪತ್ನಿಯ ಅನುಮತಿ ಇಲ್ಲದೆ ಅಥವಾ ಮೊದಲ ಪತ್ನಿಗೆ ಡೈವೋರ್ಸ್ ನೀಡದೇ ಎರಡನೇ ಮದುವೆ ಆದಲ್ಲಿ ಆರೋಪಿಗೆ ಗರಿಷ್ಠ 7 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾಗಿರುತ್ತದೆ. ಬಹುಪತ್ನಿತ್ವವನ್ನು ಅಸ್ಸಾಂ ಸರ್ಕಾರ ಎಂದಿಗೂ ಒಪ್ಪುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ಮಹಿಳೆಯ ಘನತೆಯನ್ನು ಕಾಆಡಲು ರಾಜ್ಯ ಸರ್ಕಾರ ಬದ್ಧ ಎಂದರು. ಜೊತೆಗೆ ಸಂತ್ರಸ್ತ ವ್ಯಕ್ತಿಗೆ ಮುಂದಿನ ಜೀವನ ಸಾಗಿಸಲು ಅನುವಾಗುವಂತೆ ಆರ್ಥಿಕ ನೆರವು ನೀಡಲಾಗುತ್ತದೆ. ಇದಕ್ಕೆಂದೇ ಪ್ರತ್ಯೇಕ ನಿಧಿ ಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕಾಯ್ದೆ ಜಾರಿ ಏಕೆ?:
ಲಿಂಗ ಸಮಾನತೆ, ಮಹಿಳೆಯರ ಹಕ್ಕುಗಳ ರಕ್ಷಣೆ, ವಿವಾಹದ ಪಾವಿತ್ರ್ಯತೆ ಕಾಪಾಡುವ ವಿಶಾಲ ಪ್ರಯತ್ನದ ಭಾಗವಾಗಿ ಈ ಕಾಯ್ದೆ ರೂಪಿಸಲಾಗುತ್ತಿದೆ. ಜೊತೆಗೆ ವೈಯಕ್ತಿಕ ಕಾನೂನುಗಳು, ಸಮಾನತೆ ಮತ್ತು ನ್ಯಾಯದ ಸಾಂವಿಧಾನಿಕ ತತ್ವಗಳಿಗೆ ಪೂರಕವಾಗಿರುವಂತೆ ನೋಡಿಕೊಳ್ಳುವ ಉದ್ದೇಶವೂ ಇದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.
;Resize=(690,390))
)

;Resize=(128,128))
;Resize=(128,128))
;Resize=(128,128))
;Resize=(128,128))