ರಾಮಮೂರ್ತಿಯ ಮೇಲಿಂದು ಸೂರ್ಯತಿಲಕ

| Published : Apr 17 2024, 01:21 AM IST / Updated: Apr 17 2024, 01:22 AM IST

ಸಾರಾಂಶ

ರಾಮ ಮಂದಿರದ ಬಾಲರಾಮನ ಮೇಲೆ ಸೂರ್ಯ ರಶ್ಮಿಯನ್ನು ಚಿಮ್ಮಿಸುವ ಸೂರ್ಯ ತಿಲಕ ಬುಧವಾರದಂದು ನಡೆಯಲಿದೆ

ಅಯೋಧ್ಯೆ: ಇಲ್ಲಿನ ರಾಮ ಮಂದಿರದ ಬಾಲರಾಮನ ಮೇಲೆ ಸೂರ್ಯ ರಶ್ಮಿಯನ್ನು ಚಿಮ್ಮಿಸುವ ಸೂರ್ಯ ತಿಲಕ ಬುಧವಾರದಂದು ನಡೆಯಲಿದೆ. ಈ ವೇಳೆ ಸೂರ್ಯನ ರಶ್ಮಿಯ ರಾಮನ ಹಣೆಯ ಮೇಲೆ ಮೂರುವರೆ ನಿಮಿಷಗಳ ಕಾಲ ಪ್ರಕಾಶಿಸಲಿದೆ. ಈ ಅವಧಿಯ ಮಧ್ಯೆ 2 ನಿಮಿಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಸೂರ್ಯ ಪ್ರಕಾಶಿಸಲಿದ್ದಾನೆ. ಸೂರ್ಯನ ತಿಲಕ 5.8 ಸೆಂ.ಮೀ.ಇರಲಿದೆ. ಪ್ರಯೋಗವನ್ನು ರೂರ್ಕಿಯ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ ತಜ್ಞರ ಸಮ್ಮುಖದಲ್ಲಿ ಮಂಗಳವಾರ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ.