ಕೇದಾರನಾಥದ ಸರೋವರದಲ್ಲಿ ಹಿಮಕುಸಿತ: ಭಕ್ತರಲ್ಲಿ ಆತಂಕ

| Published : Jul 01 2024, 01:49 AM IST / Updated: Jul 01 2024, 07:24 AM IST

ಸಾರಾಂಶ

ಕೇದಾರನಾಥ ದೇವಸ್ಥಾನದ ಹಿಂದಿನ ಬೆಟ್ಟಗಳಲ್ಲಿ ಭಾನುವಾರ ಹಿಮಕುಸಿತ ಸಂಭವಿಸಿದ್ದು, ಯಾತ್ರಿಕರ ಆತಂಕಕ್ಕೆ ಕಾರಣವಾಗಿದೆ. ‘ 

ಕೇದಾರನಾಥ: ಕೇದಾರನಾಥ ದೇವಸ್ಥಾನದ ಹಿಂದಿನ ಬೆಟ್ಟಗಳಲ್ಲಿ ಭಾನುವಾರ ಹಿಮಕುಸಿತ ಸಂಭವಿಸಿದ್ದು, ಯಾತ್ರಿಕರ ಆತಂಕಕ್ಕೆ ಕಾರಣವಾಗಿದೆ. ‘ಭಾನುವಾರ ಮುಂಜಾನೆ 5 ಗಂಟೆಗೆ ಹಿಮಕುಸಿತವಾಗಿದ್ದು ಯಾವುದೇ ಆಸ್ತಿ ಹಾನಿ ಹಾಗೂ ಸಾವುನೋವು ಸಂಭವಿಸಿಲ್ಲ’ ಎಂದು ರುದ್ರಪ್ರಯಾಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಶಾಖಾ ಅಶೋಕ್ ಭದನೆ ಹೇಳಿದ್ದಾರೆ. 

ಹಿಮ ಬೆಟ್ಟದಿಂದ ಕೆಳಗಿಳಿದು ಬಂದಿದ್ದು, ಅದರ ಧೂಳು ಎದ್ದಿತ್ತು. ಈ ಪರಿಸ್ಥಿತಿ ಕೆಲಕಾಲ ಮುಂದುವರೆದಿದೆ. ಬದರಿನಾಥ, ಕೇದಾರನಾಥ, ಗಂಗೋತ್ರಿ ಹಾಗೂ ಯಮುನೋತ್ರಿ ಸೇರಿದ ನಾಲ್ಕು ಧಾಮಗಳ ಯಾತ್ರೆಗೆ ಈಗ ನಡೆದಿದ್ದು, ಲಕ್ಷಾಂತರ ಭಕ್ತರು ಭೇಟಿ ನೀಡಿದ್ದಾರೆ.