ಸಾರಾಂಶ
ಅಯೋಧ್ಯೆಯಲ್ಲಿ ಇನ್ನೇನು ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲಿದ್ದು, ಇಲ್ಲಿಗೆ ವಿವಿಧ ರಾಜ್ಯ, ದೇಶಗಳ ಅಸಂಖ್ಯಾತ ಭಕ್ತರು ಆಗಮಿಸಲಿದ್ದಾರೆ. ಹೀಗಾಗಿ ಅವರಿಗೆ ಅನುಕೂಲವಾಗಲು ಭಾರತದ 28 ಭಾಷೆಗಳು ಸೇರಿ 6 ವಿದೇಶಿ ಭಾಷೆಗಳಲ್ಲಿ ಫಲಕಗಳನ್ನು ಅಳವಡಿಸಲಾಗುತ್ತಿದೆ.
ಅಯೋಧ್ಯೆ: ಇಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ನೋಡಲು ಭೇಟಿ ನೀಡುವ ದೇಶದ ಎಲ್ಲಾ ಜನರ ಅನುಕೂಲಕ್ಕಾಗಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತಿದೆ.
ಸಂವಿಧಾನದ 8ನೇ ಅನುಸೂಚಿಯಲ್ಲಿರುವ 22 ಭಾಷೆಗಳು ಹಾಗೂ ವಿಶ್ವಸಂಸ್ಥೆ 6 ಅಧಿಕೃತ ಭಾಷೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ದೇಶ ಹಾಗೂ ಜಗತ್ತಿನ ಯಾವುದೇ ಮೂಲೆಯಿಂದ ಜನ ಅಯೋಧ್ಯೆಗೆ ಭೇಟಿ ನೀಡಿದರೂ ಸಹ ತಮ್ಮ ಗುರಿ ತಲುಪಲು ಇದು ಸಹಾಯ ಮಾಡಲಿದೆ. ಈಗಾಗಲೇ ರಾಮ್ ಕಿ ಪಾಡಿ, ವಿಮಾನ ನಿಲ್ದಾಣ, ಹನುಮಾನ್ ಗಿರಿ, ಕನಕ್ ಭವನ, ಅಯೋಧ್ಯ ಧಾಮ ಜಂಕ್ಷನ್‌ಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.