ಸಾರಾಂಶ
ನ್ಯೂಯಾರ್ಕ್: ಪಾಕಿಸ್ತಾನದ ಐಎಸ್‌ಐ ಜತೆ ಸೇರಿಕೊಂಡು ಪಂಜಾಬ್‌ನಲ್ಲಿ 14 ಉಗ್ರ ದಾಳಿ ನಡೆಸಿದ್ದ ಪಂಜಾಬ್ ಮೂಲದ ಉಗ್ರನನ್ನು ಅಮೆರಿಕದ ಗುಪ್ತಚರ ಸಂಸ್ಥೆ ಎಫ್‌ಬಿಐ ಬಂಧಿಸಿದೆ.ಅಮೃತಸರದ ಅಂಜಲಾ ತೆಹಸಿಲ್ ನಿವಾಸಿ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಸ್ಸಿಯಾ/ಜೋರಾ ಬಂಧಿತ ಉಗ್ರ. ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಈತನನ್ನು ಎಫ್‌ಬಿಐ ಮತ್ತು ಅಮೆರಿಕದ ವಲಸೆ ಹಾಗೂ ಕಸ್ಟಮ್ಸ್ ಇಲಾಖೆ ಸೇರಿಕೊಂಡು ಸ್ಯಾಕ್ರಾಮೆಂಟೋದಲ್ಲಿ ಬಂಧಿಸಿದೆ.
ಪಾಕಿಸ್ತಾನದ ಐಎಸ್‌ಐ ಮತ್ತು ಖಲಿಸ್ತಾನಿ ಉಗ್ರ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಜತೆಗೆ ಈತ ಸಂಪರ್ಕದಲ್ಲಿದ್ದ ಈತ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ ಎಂದು ಎಫ್‌ಬಿಐ ಹೇಳಿದೆ.ಪಾಕಿಸ್ತಾನ ಮೂಲದ ಗ್ಯಾಂಗ್‌ಸ್ಟರ್-ಉಗ್ರ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಜತೆಗೆ ಆತ್ಮೀಯ ಸಂಬಂಧ ಹೊಂದಿದ್ದ ಈತ, ಪಂಜಾಬ್‌ನಲ್ಲಿ ಕಳೆದ ಆರು ತಿಂಗಳುಗಳಲ್ಲಿ 14 ಉಗ್ರ ದಾಳಿ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ. ಕಳೆದ ವರ್ಷ ನವೆಂಬರ್‌ನಿಂದ ಪೊಲೀಸರನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಲಾಗಿದೆ.
ಚಂಡೀಘಡದಲ್ಲಿ ಮನೆಯೊಂದರ ಮೇಲಿನ ಹ್ಯಾಂಡ್ ಗ್ರೆನೇಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಜನವರಿಯಲ್ಲಿ ಎನ್‌ಐಎಯು ಗ್ಯಾಂಗ್‌ಸ್ಟರ್ ಹರ್‌ಪ್ರೀತ್ ಮಾಹಿತಿ ಕೊಟ್ಟವರಿಗೆ 5 ಲಕ್ಷಗಳ ನಗದು ಬಹುಮಾನ ಘೋಷಿಸಿತ್ತು.
)
;Resize=(128,128))
;Resize=(128,128))
;Resize=(128,128))
;Resize=(128,128))