ಸತತ ಆರು ಚುನಾವಣೆಯಲ್ಲಿ ಸೋಲಿನ ಬಳಿಕ ಮಾಜಿ ಫುಟ್ಬಾಲಿಗ ಬೈಚುಂಗ್‌ ಭುಟಿಯಾ ರಾಜಕೀಯದಿಂದ ನಿವೃತ್ತಿ ಪಡೆದಿದ್ದಾರೆ.

ಗ್ಯಾಂಗ್ಟಕ್‌: ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ನಾಯಕ ಮತ್ತು ಭಾರತದ ಮಾಜಿ ಫುಟ್ಬಾಲ್ ನಾಯಕ, ಭೈಚುಂಗ್ ಭುಟಿಯಾ ಅವರು ಮಂಗಳವಾರ ಎಲ್ಲಾ ರೀತಿಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.

ಬೈಚುಂಗ್‌ ರಾಜಕೀಯಕ್ಕೆ ಸೇರಿದ ನಂತರ 6 ಸಲ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಹೀಗಾಗಿ ಬೇಸತ್ತು ನಿವೃತ್ತಿ ಘೋಷಿಸಿದ್ದಾರೆ.

‘ಇತ್ತೀಚಿನ ಸಿಕ್ಕಿಂ ಚುನಾವಣೆಯಲ್ಲಿ ನಾನು 6ನೇ ಬಾರಿ ಸೋತ ನಂತರ ನನಗೆ ಚುನಾವಣಾ ರಾಜಕೀಯ ಪಥ್ಯವಲ್ಲ ಎನ್ನಿಸಿತು. ನನ್ನ ನಿರ್ಧಾರ ನೋವು ಉಂಟು ಮಾಡಬಹುದು.

ಆದರೂ ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸಿ’ ಎಂದು ಅಭಿಮಾನಿಗಳಿಗೆ ಕೋರಿದ್ದಾರೆ.