ಸಾರಾಂಶ
ಪಹಲ್ಗಾಂ ಉಗ್ರದಾಳಿಯ ಬೆನ್ನಲ್ಲೇ ಪಾಕಿಸ್ತಾನದ ಸುದ್ದಿ, ಸಾಮಾಜಿಕ ಮಾಧ್ಯಮಗಳು, ತಾರೆಯರ ಸೋಷಿಯಲ್ ಮೀಡಿಯಾ ಖಾತೆಗಳ ಮೇಲೆ ಭಾರತದಲ್ಲಿ ಹೇರಲಾಗಿದ್ದ ನಿರ್ಬಂಧನನ್ನು ಇದೀಗ ತೆರವುಗೊಳಿಸಲಾಗಿದೆ.
ನವದೆಹಲಿ: ಪಹಲ್ಗಾಂ ಉಗ್ರದಾಳಿಯ ಬೆನ್ನಲ್ಲೇ ಪಾಕಿಸ್ತಾನದ ಸುದ್ದಿ, ಸಾಮಾಜಿಕ ಮಾಧ್ಯಮಗಳು, ತಾರೆಯರ ಸೋಷಿಯಲ್ ಮೀಡಿಯಾ ಖಾತೆಗಳ ಮೇಲೆ ಭಾರತದಲ್ಲಿ ಹೇರಲಾಗಿದ್ದ ನಿರ್ಬಂಧನನ್ನು ಇದೀಗ ತೆರವುಗೊಳಿಸಲಾಗಿದೆ.
ಈ ಬಗ್ಗೆ ಸರ್ಕಾರದ ಕಡೆಯಿಂದ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ ಈ ಪಾಕಿಸ್ತಾನಿ ಖಾತೆಗಳು ಭಾರತದಲ್ಲಿ ಬುಧವಾರದಿಂದ ಗೋಚರಿಸಲು ಆರಂಭವಾಗಿವೆ. ಹೀಗಾಗಿ ಶಾಹಿದ್ ಅಫ್ರಿದಿ. ಸಬಾ ಕಮರ್, ಮಾವ್ರಾ ಹೊಕಾನೆ, ಅಹದ್ ರಜಾ ಮಿರ್, ಹಾನಿಯಾ ಅಮೀರ್, ಯುಮ್ನಾ ಜೈದಿ ಮತ್ತು ಡ್ಯಾನಿಶ್ ತೈಮೂರ್ ಸೇರಿದಂತೆ ಹಲವು ಸೆಲೆಬ್ರಿಟಿಗಳ ಇನ್ಸ್‌ಟಾಗ್ರಾಂ ಖಾತೆಗಳನ್ನು ಈಗ ವೀಕ್ಷಿಸಬಹುದಾಗಿದೆ.ಸುಳ್ಳು ಸುದ್ದಿ ಹರಡುವಿಕೆಯನ್ನು ತಡೆಯುವಿಕೆ ಸೇರಿದಂತೆ ಹಲವು ಉದ್ದೇಶಗಳಿಂದ, ಪಾಕಿಸ್ತಾನದ ಸುದ್ದಿಸಂಸ್ಥೆಗಳು ಮತ್ತು ಹಲವು ಅಧಿಕಾರಿಗಳ ಎಕ್ಸ್ ಖಾತೆ, ಯೂಟ್ಯೂಬ್ ಚಾನಲ್‌ಗಳನ್ನು ನಿರ್ಬಂಧಿಸಲಾಗಿತ್ತು.