ಬಾಂಗ್ಲಾದಲ್ಲಿ 7 ಅಂತಸ್ತಿನಕಟ್ಟದಲ್ಲಿ ಅಗ್ನಿ ಅವಗಢ: 46 ಜನರ ಭೀಕರ ಸಾವು

| Published : Mar 02 2024, 01:49 AM IST

ಸಾರಾಂಶ

ಢಾಕಾದದ ಬಹುಮಹಡಿ ಕಟ್ಟಡವೊಂದರಲ್ಲಿ ಅಗ್ನಿ ಅವಗಢ ಸಂಭವಿಸಿದ ಪರಿಣಾಮ 46ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸುಮಾರು 22 ಮಂದಿ ಗಾಯಗೊಂಡಿದ್ದಾರೆ.

ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದ 7 ಮಹಡಿಯ ಕಟ್ಟಡವೊಂದರಲ್ಲಿ ಗುರುವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ 46 ಜನರು ಸಾವನ್ನಪ್ಪಿ, 22 ಜನರು ಗಾಯಗೊಂಡಿದ್ದಾರೆ.

ನಗರದ ಖ್ಯಾತ ಗ್ರೀನ್‌ ಕೋಜಿ಼ ಕಾಟೇಜ್‌ ಕಟ್ಟಡದ ಮೊದಲ ಮಹಡಿಯಲ್ಲಿದ್ದ ಕಚ್ಚಿ ಭಾಯಿ ಹೋಟೆಲ್‌ನಲ್ಲಿ ಗುರುವಾರ ರಾತ್ರಿ 10 ಗಂಟೆಯ ವೇಳೆಗೆ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇತರೆ ಮಹಡಿಗಳಿಗೂ ಹಬ್ಬಿ ಈ ದುರ್ಘಟನೆ ಸಂಭವಿಸಿದೆ.

ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಏರುವ ಭೀತಿ ಇದೆ.

ಈ ನಡುವೆ ಅವಘಡದ ಕುರಿತು ತನಿಖೆಗೆ ಸರ್ಕಾರ ಐವರ ಸಮಿತಿ ರಚಿಸಿದೆ.