ಸಾರಾಂಶ
ಅಕ್ರಮ ಶಸ್ತ್ರಾಸ್ತ್ರ ಸಾಗಣೆ ಪ್ರಕರಣದಲ್ಲಿ ಜೀವಾವಾಧಿ ಶಿಕ್ಷೆಗೆ ಗುರಿಯಾಗಿದ್ದ ಪ್ರತ್ಯೇಕವಾದಿ ಉಲ್ಫಾ ಉಗ್ರ ಪರೇಶ್ ಬರುವಾನ ಶಿಕ್ಷೆಯನ್ನು ಬಾಂಗ್ಲಾದೇಶ ಹೈಕೋರ್ಟ್ 14 ವರ್ಷಕ್ಕೆ ಇಳಿಕೆ ಮಾಡಿದೆ. ಅಲ್ಲದೇ ಶಸ್ತ್ರಾಸ್ತ್ರ ಕಾಯ್ದೆ ಅಡಿ ಬಂಧನಕ್ಕೊಳಗಾಗಿದ್ದ ಹಲವರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.
ಢಾಕಾ: ಅಕ್ರಮ ಶಸ್ತ್ರಾಸ್ತ್ರ ಸಾಗಣೆ ಪ್ರಕರಣದಲ್ಲಿ ಜೀವಾವಾಧಿ ಶಿಕ್ಷೆಗೆ ಗುರಿಯಾಗಿದ್ದ ಪ್ರತ್ಯೇಕವಾದಿ ಉಲ್ಫಾ ಉಗ್ರ ಪರೇಶ್ ಬರುವಾನ ಶಿಕ್ಷೆಯನ್ನು ಬಾಂಗ್ಲಾದೇಶ ಹೈಕೋರ್ಟ್ 14 ವರ್ಷಕ್ಕೆ ಇಳಿಕೆ ಮಾಡಿದೆ. ಅಲ್ಲದೇ ಶಸ್ತ್ರಾಸ್ತ್ರ ಕಾಯ್ದೆ ಅಡಿ ಬಂಧನಕ್ಕೊಳಗಾಗಿದ್ದ ಹಲವರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.
ಕಳೆದ ಡಿಸೆಂಬರ್‌ನಲ್ಲಿ ಇದೇ ಪ್ರಕರಣದಲ್ಲಿ ಬರುವಾಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಗಿತ್ತು. ಅದನ್ನು ಇದೀಗ 14 ವರ್ಷಕ್ಕೆ ಇಳಿಸಲಾಗಿದೆ.ಭಾರತದ ಎನ್‌ಐಎ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಬರುವಾ, ಉಲ್ಫಾ ಸಂಘಟನೆ ಮೂಲಕ ಈಶಾನ್ಯ ರಾಜ್ಯಗಳಲ್ಲಿ ದಶಕಗಳ ಕಾಲ ದೇಶವಿರೋಧಿ ಕೃತ್ಯ ನಡೆಸಿದ್ದ. ಇದೇ ಕೃತ್ಯದ ಭಾಗವಾಗಿ 2004ರಲ್ಲಿ ಬಾಂಗ್ಲಾದೇಶದ ಚಿತ್ತಗಾಂಗ್ ಮೂಲಕ ಭಾರತಕ್ಕೆ 10 ಟ್ರಕ್ ಲೋಡ್ ಶಸ್ತ್ರಾಸ್ತ್ರ ಸಾಗಿಸಲು ಯತ್ನಿಸಿದ್ದ. ಅದನ್ನು ವಶಪಡಿಸಿಕೊಂಡಾಗ ಟ್ರಕ್‌ನೊಳಗೆ 27 000ಕ್ಕೂ ಹೆಚ್ಚು ಗ್ರೇನೆಡ್, 150 ರಾಕೆಟ್ ಲಾಂಚರ್, 11 ಲಕ್ಷಕ್ಕೂ ಹೆಚ್ಚು ಮದ್ದುಗುಂಡು, 1100 ಸಬ್ ಮೆಷಿನ್ ಗನ್‌ಳು ಮತ್ತು 1.14 ಕೋಟಿ ಬುಲೆಟ್ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣಗಳಲ್ಲಿ ಬರುವಾ ಮತ್ತು ಇತರ ನಾಲ್ವರಿಗೆ ಗಲ್ಲು ಶಿಕ್ಷೆ ಪ್ರಕಟಿಸಲಾಗಿತ್ತು.
ಪ್ರಕರಣದಲ್ಲಿ ಒಮ್ಮೆಯೂ ಬಂಧನಕ್ಕೆ ಒಳಗಾಗದ ಸದ್ಯ ಚೀನಾದಲ್ಲಿ ಅಲ್ಲಿನ ಸರ್ಕಾರದ ನೆರವಿನೊಂದಿಗೆ ಆಶ್ರಯ ಪಡೆದಿದ್ದಾನೆ ಎನ್ನಲಾಗಿದೆ.