ಟಿಎಂಸಿ ಬಿಟ್ಟು ಮರಳಿ ಬಿಜೆಪಿಗೆ: ಸಂಸದ ಅರ್ಜುನ್‌ ಸಿಂಗ್‌ ಘೋಷಣೆ

| Published : Mar 15 2024, 01:20 AM IST

ಟಿಎಂಸಿ ಬಿಟ್ಟು ಮರಳಿ ಬಿಜೆಪಿಗೆ: ಸಂಸದ ಅರ್ಜುನ್‌ ಸಿಂಗ್‌ ಘೋಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ತೊರೆದು ಬಿಜೆಪಿಗೆ ಮರಳಿ ಬರುವುದಾಗಿ ಬ್ಯಾರಕ್‌ಪುರ ಕ್ಷೇತ್ರದ ಸಂಸದ ಅರ್ಜುನ್‌ ಸಿಂಗ್‌ ಘೋಷಿಸಿದ್ದಾರೆ.

ಕೋಲ್ಕತಾ: ಪ.ಬಂಗಾಳದ ಟಿಎಂಸಿ ಪಕ್ಷದಿಂದ ಬ್ಯಾರಕ್‌ಪುರ ಕ್ಷೇತ್ರದ ಟಿಕೆಟ್‌ ನಿರಾಕಣೆಯಿಂದ ನಿರಾಶೆಗೊಂಡ ಟಿಎಂಸಿ ನಾಯಕ ಅರ್ಜುನ್‌ ಸಿಂಗ್‌ ಟಿಎಂಸಿ ಪಕ್ಷ ತೊರೆದು ಬಿಜೆಪಿಗೆ ಮರಳುವುದಾಗಿ ಗುರುವಾರ ಘೋಷಿಸಿದ್ದಾರೆ. ಅವರೊಂದಿಗೆ ಕೆಲವು ದೊಡ್ಡ ಟಿಎಂಸಿ ನಾಯಕರು ಸಹ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ನಾನು 2022 ರಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಸೇರಿದಾಗ, ಬ್ಯಾರಕ್‌ಪುರ್ ಲೋಕಸಭಾ ಕ್ಷೇತ್ರದಿಂದ ಟಿಎಂಸಿಯ ಅಭ್ಯರ್ಥಿಯಾಗಿ ನನ್ನನ್ನು ಮರು ನಾಮನಿರ್ದೇಶನ ಮಾಡಲಾಗುವುದಾಗಿ ಟಿಎಂಸಿ ಪಕ್ಷ ಭರವಸೆ ನೀಡಿತ್ತು. ಆದರೆ ಪಕ್ಷವು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಆದ್ದರಿಂದ ಬಿಜೆಪಿಗೆ ಮರಳಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

2019ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಿಂದ ಆಯ್ಕೆಯಾದ ನಂತರ ಅರ್ಜುನ್‌ ಸಿಂಗ್‌ ಬಿಜೆಪಿ ತೊರೆದು ಟಿಎಂಸಿಗೆ ಸೇರ್ಪಡೆಗೊಂಡಿದ್ದರು.