ಕೋವಿಡ್ ಸಮಯದಲ್ಲಿ ಸಹಾಯವನ್ನು ಗುರುತಿಸಿ ಪ್ರಧಾನಿ ಮೋದಿಗೆ ಬಾರ್ಬಡೋಸ್‌ನ ಪ್ರತಿಷ್ಠಿತ ಪ್ರಶಸ್ತಿ

| N/A | Published : Mar 07 2025, 12:49 AM IST / Updated: Mar 07 2025, 07:06 AM IST

ಸಾರಾಂಶ

ಕೋವಿಡ್ ಸಮಯದಲ್ಲಿ ತೋರಿಸಿದ ನಾಯಕತ್ವ ಮತ್ತು ಅಮೂಲ್ಯವಾದ ಸಹಾಯವನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾರ್ಬಡೋಸ್ ದೇಶದ ಪ್ರತಿಷ್ಠಿತ ‘ಆನರರಿ ಆರ್ಡರ್ ಆಫ್ ಫ್ರೀಡಂ ಆಫ್ ಬಾರ್ಬಡೋಸ್’ ಪ್ರಶಸ್ತಿ ನೀಡಲಾಗಿದೆ.

ನವದೆಹಲಿ: ಕೋವಿಡ್ ಸಮಯದಲ್ಲಿ ತೋರಿಸಿದ ನಾಯಕತ್ವ ಮತ್ತು ಅಮೂಲ್ಯವಾದ ಸಹಾಯವನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾರ್ಬಡೋಸ್ ದೇಶದ ಪ್ರತಿಷ್ಠಿತ ‘ಆನರರಿ ಆರ್ಡರ್ ಆಫ್ ಫ್ರೀಡಂ ಆಫ್ ಬಾರ್ಬಡೋಸ್’ ಪ್ರಶಸ್ತಿ ನೀಡಲಾಗಿದೆ. 

ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಪರವಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪಬಿತ್ರಾ ಮಾರ್ಗರಿಟಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಪ್ರಶಸ್ತಿಯು ಎರಡೂ ರಾಷ್ಟ್ರಗಳ ನಡುವಿನ ಶಾಶ್ವತ ಸ್ನೇಹವನ್ನು ಸಂಕೇತಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ ನ.20ರಂದು ಗಯಾನಾದ ಜಾರ್ಜ್‌ಟೌನ್‌ನಲ್ಲಿ ನಡೆದ 2ನೇ ಭಾರತ-ಕ್ಯಾರಿಕೊಮ್ ನಾಯಕರ ಶೃಂಗಸಭೆ ಸಂದರ್ಭದಲ್ಲಿ ಬಾರ್ಬಡೋಸ್ ಪ್ರಧಾನಿ ಮಿಯಾ ಅಮೋರ್ ಮೊಟ್ಲಿ ಪ್ರಶಸ್ತಿ ಘೋಷಣೆ ಮಾಡಿದ್ದರು.