ರೈತ ಪ್ರತಿಭಟನೆ ಸ್ಥಗಿತ: ದಿಲ್ಲಿ ಗಡಿಯ ಪಾದಚಾರಿ ಬ್ಯಾರಿಕೇಡ್‌ ತೆರವು

| Published : Feb 26 2024, 01:30 AM IST

ರೈತ ಪ್ರತಿಭಟನೆ ಸ್ಥಗಿತ: ದಿಲ್ಲಿ ಗಡಿಯ ಪಾದಚಾರಿ ಬ್ಯಾರಿಕೇಡ್‌ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ರೈತ ಪ್ರತಿಭಟನೆಯನ್ನು ಮೂರು ದಿನಗಳ ಕಾಲ ಹಿಂಪಡೆದಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿದ್ದ ಬ್ಯಾರಿಕೇಡ್‌ ತೆರವುಗೊಳಿಸಿ ಪಾದಚಾರಿಗಳಿಗೆ ಅನುವು ಮಾಡಿಕೊಡಲಾಗಿದೆ.

ನವದೆಹಲಿ: ‘ದೆಹಲಿ ಚಲೋ’ ಪ್ರತಿಭಟನೆ ಮೂಲಕ ದೆಹಲಿಗೆ ನುಗ್ಗಲು ಹೊರಟಿದ್ದ ಪಂಜಾಬ್‌ ಹರ್ಯಾಣ ರೈತರು ಫೆ.29ರ ವರೆಗೆ ತಮ್ಮ ಹೋರಾಟವನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಭಾನುವಾರ ದೆಹಲಿ ಪ್ರಚೇಶ ಗಡಿಗಳ ಪಾದಚಾರಿ ಮಾರ್ಗವನ್ನು ಮುಕ್ತಗೊಳಿಸಲಾಗಿದೆ. ಅದಾಗ್ಯೂ ವಾಹನ ಸಂಚಾರಕ್ಕೆ ಅನುಮತಿಸಲಾಗಿಲ್ಲ.

ರೈತರನ್ನು ನಿರ್ಬಂಧಿಸುವ ಉದ್ದೇಶದಿಂದ ದೆಹಲಿಯ ಪ್ರವೇಶ ಗಡಿಗಳನ್ನು ಬಂದ್‌ ಮಾಡಲಾಗಿತ್ತು. ಭಾನುವಾರ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿನ ಬ್ಲಾಕ್‌ಗಳ ರಸ್ತೆಯಲ್ಲಿನ ಒಂದು ಭಾಗವನ್ನು ಮುಕ್ತಗೊಳಿಸಿದ ಪೊಲೀಸರು ಕಾಲ್ನಡಿಗೆ ಮೂಲಕ ಸಾಗುವ ಪ್ರಯಾಣಿಕರಿಗೆ ಅನುವು ಮಾಡಿಕೊಟ್ಟರು. ‘ನಾವು ಪ್ರಯಾಣಿಕರಿಗಾಗಿ ಪಾಯಿಂಟ್-ಎ ನಿಂದ ಪಾಯಿಂಟ್-ಬಿ ವರೆಗಿನ ತಡೆಗೋಡೆಯ ಒಂದು ಭಾಗವನ್ನು ತೆಗೆದುಹಾಕುತ್ತಿದ್ದೇವೆ. ಸದ್ಯಕ್ಕೆ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಹಲವು ರೈತ ಸಂಘಟನೆಗಳು ದೆಹಲಿ ಚಲೋ ಪ್ರತಿಭಟನೆ ಕೈಗೊಂಡಿದ್ದು, ಅವುಗಳನ್ನು ಪಂಜಾಬ್‌ ಮತ್ತು ಚಂಡೀಗಢ ಗಡಿಯಲ್ಲಿ ನಿರ್ಬಂಧಿಸಲಾಗಿದೆ.