ಸಾರಾಂಶ
ಸಿಬಿಐ ವಶದಲ್ಲಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಹಲ್ಲೆ ಮಾಡಿದ ಆರೋಪಿ ಶಾಜಹಾನ್ ಶೇಖ್‌ನ ಕಸ್ಟಡಿಯನ್ನು 4 ದಿನ ವಿಸ್ತರಣೆ ಮಾಡಿ ಬಸಿರ್ಹತ್ ನ್ಯಾಯಾಲಯ ಆದೇಶಿಸಿದೆ.
ಬಸಿರ್ಹಾತ್ (ಪ.ಬಂಗಾಳ): ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಹಲ್ಲೆ ಮಾಡಲು ಪ್ರಚೋದನೆ ನೀಡಿದ ಪ್ರಕರಣದಲ್ಲಿ ಬಂಧಿಯಾಗಿರುವ ಪ.ಬಂಗಾಳದ ಸಂದೇಶ್‌ಖಾಲಿ ಗ್ರಾಮದ ಉಚ್ಚಾಟಿತ ಟಿಎಂಸಿ ನಾಯಕ ಶಾಜಹಾನ್ ಶೇಖ್‌ನನ್ನು ಕೋರ್ಟ್ ಮತ್ತೆ 4 ದಿನ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ.ಈ ನಡುವೆ, ಆರೋಪಿ ಶಾಜಹಾನ್‌ನನ್ನು ಮತ್ತೆ ಮಾ.14ರಂದು ತನ್ನ ಮುಂದೆ ಹಾಜರುಪಡಿಸಬೇಕೆಂದು ಸಿಬಿಐಗೆ ಕೋರ್ಟ್ ಸೂಚಿಸಿದೆ. ಜ.5ರಂದು ಸಂದೇಶ್‌ಖಾಲಿಯಲ್ಲಿ ಶಾಜಹಾನ್ ಶೇಖ್ ಮತ್ತು ಸಹಚರರ ವಿಚಾರಣೆಗೆ ಬಂದ ಇಡಿ ಅಧಿಕಾರಿಗಳ ಮೇಲೆ ಆತನ 1000ಕ್ಕೂ ಹೆಚ್ಚು ಬಂಟರು ದಾಳಿ ಮಾಡಿದ್ದರು. ಬಳಿಕ ಶಾಜಹಾನ್ ಬಂಧನವಾಗಿತ್ತು.