ಸಮೀಕ್ಷೆಗಳನ್ನೂ ಮೀರಿ ಗೆದ್ದ ಎನ್‌ಡಿಎ ಮೈತ್ರಿಕೂಟ

| Published : Nov 15 2025, 01:00 AM IST

ಸಾರಾಂಶ

: ಬಿಹಾರ ಚುನಾವಣೆ ಸಂಬಂಧ ಪ್ರಕಟವಾಗಿದ್ದ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಪೂರ್ಣ ಪ್ರಮಾಣದಲ್ಲಿ ನಿಜವಾಗಿದೆ.

- 200ರ ಗಡಿ ದಾಟುವ ಬಗ್ಗೆ ಯಾರಿಗೂ ನಿರೀಕ್ಷೆ ಇಲ್ಲಪಟನಾ: ಬಿಹಾರ ಚುನಾವಣೆ ಸಂಬಂಧ ಪ್ರಕಟವಾಗಿದ್ದ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಪೂರ್ಣ ಪ್ರಮಾಣದಲ್ಲಿ ನಿಜವಾಗಿದೆ. ಎಲ್ಲಾ ಸಮೀಕ್ಷೆಗಳು ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತಕ್ಕೆ ಅಗತ್ಯವಾದ 122 ಸ್ಥಾನ ಬರಲಿದೆ ಎಂದಿದ್ದವು. ಆದರೆ ಇದೀಗ ಎನ್‌ಡಿಎ ಮೈತ್ರಿಕೂಟ 200 ಸ್ಥಾನ ಪಡೆಯುವ ಮೂಲಕ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದೆ.

ಚಾಣಕ್ಯ ಸ್ಟ್ರಾಟಜೀಸ್‌ ಸಂಸ್ಥೆಯು ಎನ್‌ಡಿಎಗೆ 130-138, ಇಂಡಿಕೂಟಕ್ಕೆ 100-108 ಮತ್ತು ಇತರೆಗೆ 3-5 ಸೀಟು ಸಿಗುವ ಸಾಧ್ಯತೆಯಿದೆ ಎಂದಿತ್ತು. ದೈನಿಕ್‌ ಭಾಸ್ಕರ್‌ ಎನ್‌ಡಿಎಗೆ 145-160, ಇಂಡಿಕೂಟಕ್ಕೆ 73-91, ಇತರೆಗೆ 5-10. ಪಿ-ಮಾರ್ಕ್‌ ಎನ್‌ಡಿಎಗೆ 142-162, ಇಂಡಿಕೂಟಕ್ಕೆ 80-98, ಇತರೆ 1-7. ಪೀಪಲ್ಸ್‌ ಇನ್‌ಸೈಟ್‌ ಎನ್‌ಡಿಎಗೆ 133-148, ಇಂಡಿಕೂಟಕ್ಕೆ 87-102, ಇತರೆಗೆ 3-8 ಸೀಟುಗಳು ಸಿಗುವುದಾಗಿ ಹೇಳಿದ್ದವು. ಅದೇ ರೀತಿ ಪೋಲ್‌ ಆಫ್‌ ಪೋಲ್ಸ್‌ ಎನ್‌ಡಿಎಗೆ 147,ಇಂಡಿಕೂಟಕ್ಕೆ 90, ಇತರೆಗೆ 06 ಕ್ಷೇತ್ರಗಳು ಸಿಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದವು.ಜೊತೆಗೆ ಎರಡೂ ಸಮೀಕ್ಷೆಗಳು ಕಾಂಗ್ರೆಸ್‌-ಆರ್‌ಜೆಡಿ ನೇತೃತ್ವದ ಮಹಾಘಟಬಂಧನಕ್ಕೆ ಕನಿಷ್ಠ 90-110 ಸೀಟುಗಳು ಸಿಗಬಹುದು ಎಂದು ಅಂದಾಜಿಸಿದ್ದವು.

ಮ್ಯಾಟ್ರಿಜ್‌ ಹತ್ತಿರದ ಸಮೀಕ್ಷೆ:

ಮ್ಯಾಟ್ರಿಜ್‌ ನಡೆಸಿದ ಚುನಾವಣೋತ್ತರ ಸಮೀಕ್ಷೆಯು ಫಲಿತಾಂಶದ ಹತ್ತಿರಕ್ಕೆ ಬಂದ ಸಂಖ್ಯೆಯಾಗಿದೆ. ಇದು ಎನ್‌ಡಿಎಗೆ 167, ಇಂಡಿಕೂಟಕ್ಕೆ70 ಬರಲಿದೆ ಎಂದು ಅಂದಾಜಿಸಿತ್ತು. ಇದು ಎನ್‌ಡಿಎ ಗೆಲುವನ್ನು ಹತ್ತಿರದಿಂದ ಅಂದಾಜಿಸಿತ್ತು.