ಹೋಳಿ ವೇಳೆ ಮುಸ್ಲಿಮರಿಗೆ ಬಣ್ಣ: ಉ.ಪ್ರ.ದ ಬಿಜ್ನೋರ್‌ ಉದ್ವಿಗ್ನ

| Published : Mar 25 2024, 01:49 AM IST / Updated: Mar 25 2024, 03:11 PM IST

ಹೋಳಿ ವೇಳೆ ಮುಸ್ಲಿಮರಿಗೆ ಬಣ್ಣ: ಉ.ಪ್ರ.ದ ಬಿಜ್ನೋರ್‌ ಉದ್ವಿಗ್ನ
Share this Article
  • FB
  • TW
  • Linkdin
  • Email

ಸಾರಾಂಶ

ಹೋಳಿ ವೇಳೆ ಮುಸ್ಲಿಮರಿಗೆ ಬಣ್ಣ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬಿಜ್ನೋರ್‌ ಉದ್ವಿಗ್ನಗೊಂಡಿದೆ.

ಬಿಜ್ನೋರ್‌ (ಉ.ಪ್ರ.): ಹೋಳಿ ಆಚರಣೆಯ ಸಂದರ್ಭದಲ್ಲಿ ಮಹಿಳೆಯರು ಸೇರಿದಂತೆ ಮುಸ್ಲಿಂ ಕುಟುಂಬದ ಮೇಲೆ ಅಪರಿಚಿತ ವ್ಯಕ್ತಿಗಳು ಬಲವಂತವಾಗಿ ಬಣ್ಣ ಮತ್ತು ನೀರನ್ನು ಎರಚಿ ಕಿರುಕುಳ ನೀಡಿದ ಘಟನೆ ಉತ್ತರಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ. ಇದರಿಂದ ನಗರದಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದೆ.

ನಗರದ ಧಾಂಪುರ್‌ನಲ್ಲಿ ಹೋಳಿ ಸಂಭ್ರಮ ನಡೆಯುತ್ತಿರುವ ವೇಳೆ ಬೈಕಿನಲ್ಲಿ ಹಾದು ಹೋಗುತ್ತಿದ್ದ ಮುಸ್ಲಿಂ ಕುಟುಂಬದ ಮೇಲೆ ಕೆಲವರು ಬಲವಂತವಾಗಿ ಬಣ್ಣ ಹಾಗೂ ನೀರು ಎರಚಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮುಸ್ಲಿಂ ಕುಟುಂಬವು ಅಪರಿಚಿತ ವ್ಯಕ್ತಿಗಳ ಮೇಲೆ ಧಾಂಪುರ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.