ಬಿಲ್ಕಿಸ್‌ ಬಾನೋ ಪ್ರಕರಣದಲ್ಲಿ ಗುಜರಾತ್‌ ಸರ್ಕಾರದ ವಿರುದ್ಧದ ತೀರ್ಪು ಮರುಪರಿಶೀಲನೆ ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ತೀರ್ಪಿನಲ್ಲಿ ಯಾವುದೇ ಮಾರ್ಪಾಡಿನ ಅಗತ್ಯವಿಲ್ಲ ಎಂದು ಪೀಠ ಹೇಳಿದೆ.

ನವದೆಹಲಿ: ಬಿಲ್ಕಿಸ್‌ ಬಾನೋ ಅತ್ಯಾಚಾರ ಪ್ರಕರಣದ ತೀರ್ಪಿನ ವೇಳೆ ಗುಜರಾತ್‌ ಸರ್ಕಾರದ ಬಗ್ಗೆ ಕಟುಟೀಕೆ ಒಳಗೊಂಡ ತೀರ್ಪು ಮರುಪರಿಶೀಲನೆ ಕೋರಿದ್ದ ಗುಜರಾತ್‌ ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.

ತೀರ್ಪಿನಲ್ಲಿ ಯಾವುದೇ ಮಾರ್ಪಾಡಿನ ಅಗತ್ಯ ಕಂಡುಬರದ ಕಾರಣ ಅರ್ಜಿ ವಜಾಗೊಳಿಸಲಾಗಿದೆ’ ಎಂದು ನ್ಯಾ। ಬಿ.ವಿ. ನಾಗರತ್ನ ಮತ್ತು ಉಜ್ಜಲ್‌ ಭುಯನ್‌ ಪೀಠ ಹೇಳಿದೆ.

ಗರ್ಭಿಣಿ ಬಿಲ್ಕಿಸ್‌ ಬಾನೋ ಮೇಲೆ ಅತ್ಯಾಚಾರವೆಸಗಿದ್ದ 11 ದೋಷಿಗಳನ್ನು ಸನ್ನಡತೆಯ ಆಧಾರದಲ್ಲಿ ಕ್ಷಮೆ ನೀಡಿ ಗುಜರಾತ್‌ ಸರ್ಕಾರ 2022ರಲ್ಲಿ ಬಿಡುಗಡೆ ಮಾಡಿತ್ತು. ಸರ್ಕಾರದ ಈ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌, ‘ಕ್ಷಮಾದಾನ ಪಡೆದ ದೋಷಿಯೊಂದಿಗೆ ಸರ್ಕಾರ ಶಾಮೀಲಾಗಿದೆ. ಕ್ಷಮಾದಾನ ನೀಡಿ ತನ್ನ ಅಧಿಕಾರ ದುರ್ಬಳಕೆ ಮಾಡಿದೆ’ ಎಂದು ಕಿಡಿಕಾರಿತ್ತು. ಈ