ಲೋಕಸಭೆ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಗುರುವಾರ ಸಂಜೆ ಬಿಜೆಪಿ ಪ್ರಕಟಿಸಿದೆ.

ನವದೆಹಲಿ: ಲೋಕಸಭೆ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಗುರುವಾರ ಸಂಜೆ ಬಿಜೆಪಿ ಪ್ರಕಟಿಸಿದೆ. ಇದು ತಮಿಳುನಾಡಿನ 9 ಕ್ಷೇತ್ರಗಳಿಗೆ ಮಾತ್ರ ಸಂಬಂಧಿಸಿದ ಪಟ್ಟಿ ಆಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೊಯಮತ್ತೂರಿನಿಂದ ಸ್ಪರ್ಧಿಸಲಿದ್ದಾರೆ.

ಇತ್ತೀಚೆಗೆ ತೆಲಂಗಾಣ ರಾಝ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದ ತಮಿಳ್‌ಸಾಯ್‌ ಸೌಂದರರಾಜನ್‌ ಅವರಿಗೆ ಚೆನ್ನೈ ದಕ್ಷಿಣದ ಟಿಕೆಟ್‌ ಲಭಿಸಿದೆ.

ಇನ್ನು ಮಾಜಿ ಕೇಂದ್ರ ಸಚಿವ ಪೊನ್‌ ರಾಧಾಕೃಷ್ಣನ್‌ ಕನ್ಯಾಕುಮಾರಿಯಿಂದ, ಹಾಲಿ ಕೇಂದ್ರ ಸಚಿವ ಎಲ್‌. ಮುರುಗನ್‌ ನೀಲಗಿರಿ (ಎಸ್ಸಿ) ಕ್ಷೇತ್ರದಿಂದ ಟಿಕೆಟ್ ಲಭಿಸಿದೆ.