ಸಾರಾಂಶ
2023-24ನೇ ವಿತ್ತ ವರ್ಷದಲ್ಲಿ ರಾಷ್ಟ್ರೀಯ ಪಕ್ಷಗಳು ಒಟ್ಟು 2,544.278 ಕೋಟಿ ರು. ದೇಣಿಗೆ ಸಂಗ್ರಹಿಸಿವೆ. ಇದರಲ್ಲಿ ಬಿಜೆಪಿ ಒಂದೇ 2243 ಕೋಟಿ ರು. ದೇಣಿಗೆ ಸ್ವೀಕರಿಸಿ ನಂ.1 ಪಕ್ಷವಾಗಿ ಹೊರಹೊಮ್ಮಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ.
ನವದೆಹಲಿ: 2023-24ನೇ ವಿತ್ತ ವರ್ಷದಲ್ಲಿ ರಾಷ್ಟ್ರೀಯ ಪಕ್ಷಗಳು ಒಟ್ಟು 2,544.278 ಕೋಟಿ ರು. ದೇಣಿಗೆ ಸಂಗ್ರಹಿಸಿವೆ. ಇದರಲ್ಲಿ ಬಿಜೆಪಿ ಒಂದೇ 2243 ಕೋಟಿ ರು. ದೇಣಿಗೆ ಸ್ವೀಕರಿಸಿ ನಂ.1 ಪಕ್ಷವಾಗಿ ಹೊರಹೊಮ್ಮಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ.
ಬಿಜೆಪಿ 8,358 ದೇಣಿಗೆಗಳಿಂದ ಒಟ್ಟು 2,243.947 ಕೋಟಿ ರು. ಘೋಷಿಸಿದರೆ, ಕಾಂಗ್ರೆಸ್ 1994 ದೇಣಿಗೆಗಳಿಂದ 281.48 ಕೋಟಿ ರು. ಘೋಷಿಸಿದೆ. ಬಿಜೆಪಿ ಘೋಷಿಸಿದ ದೇಣಿಗೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ , ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಇಪಿ) ಮತ್ತು ಸಿಪಿಎಂ ಇದೇ ಅವಧಿಯಲ್ಲಿ ಘೋಷಿಸಿದ ಒಟ್ಟು ದೇಣಿಗೆಗಳಿಗಿಂತ 6 ಪಟ್ಟು ಹೆಚ್ಚು.
ಕಳೆದ ವರ್ಷಕ್ಕಿಂತ ಅಧಿಕ:
2022-23ರಲ್ಲಿ ಬಿಜೆಪಿಗೆ 719.858 ಕೋಟಿ ರು. ದೇಣಿಗೆ ಬಂದಿತ್ತು. ಈ ವರ್ಷ ಇದು ಶೇ.211.72ರಷ್ಟು ಹೆಚ್ಚಳವಾಗಿದೆ. ಅದೇ ರೀತಿ, ಕಾಂಗ್ರೆಸ್‌ಗೆ 79.924 ಕೋಟಿ ರು. ಬಂದಿತ್ತು. ಈ ವರ್ಷ ಶೇ.252.18ರಷ್ಟು ಹೆಚ್ಚಳವಾಗಿದೆ.
ಈ ವರ್ಷ ರಾಷ್ಟ್ರೀಯ ಪಕ್ಷಗಳು ಪಡೆದ ಒಟ್ಟು ದೇಣಿಗೆ ಕಳೆದ ವರ್ಷಕ್ಕಿಂತ 1,693.84 ಕೋಟಿ ರು.ಗಳಷ್ಟು ಹೆಚ್ಚಾಗಿದ್ದು, ಶೇ.199.17ರಷ್ಟು ಏರಿಕೆ ದಾಖಲಿಸಿದೆ.
ವಕ್ಫ್ ಕಾಯ್ದೆ ಈಗ ಅಧಿಕೃತ ಜಾರಿ
ನವದೆಹಲಿ: ಕಳೆದ ವಾರ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದ್ದ ವಕ್ಫ್ ತಿದ್ದುಪಡಿ ಮಸೂದೆಯ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದೆ. ಈ ಮೂಲಕ ಕಾಯ್ದೆ ಅಧಿಕೃತವಾಗಿ ಜಾರಿಗೆ ಬಂದಂತಾಗಿದೆ.
ಕಳೆದ ವಾರ ಅಂಗೀಕಾರಗೊಂಡಿದ್ದ ಮಸೂದೆಗೆ 4 ದಿನ ಹಿಂದೆ ರಾಷ್ಟ್ರಪತಿ ಅಂಕಿತ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯ ಅಧಿಸೂಚನೆ ಹೊರಡಿಸಿ, ‘ವಕ್ಫ್ ತಿದ್ದುಪಡಿ ಕಾಯ್ದೆ 2025ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸಿ ಕೇಂದ್ರ ಸರ್ಕಾರವು, ಈ ಕಾಯ್ದೆಯ ನಿಬಂಧನೆಗಳು ಏ.8ರಿಂದ ಜಾರಿಗೆ ಬರುತ್ತದೆ ಎಂದು ದಿನಾಂಕ ನಿಗದಿಪಡಿಸಿದೆ’ ಎಂದಿದೆ.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕ್ರಮವಾಗಿ ಏ.3, 4 ರ ಮಧ್ಯರಾತ್ರಿ ವಕ್ಫ್ ತಿದ್ದುಪಡಿ ಕಾನೂನಿಗೆ ಅಂಗೀಕಾರ ಸಿಕ್ಕಿತ್ತು. ಏ.5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾನೂನಿಗೆ ಅಂಕಿತ ಹಾಕಿದ್ದರು.