ರಾಹುಲ್‌ ಮ್ಯಾಚ್‌ ಫಿಕ್ಸಿಂಗ್‌ ಹೇಳಿಕೆ ವಿರುದ್ಧ ಕ್ರಮ ಕೋರಿ ಆಯೋಗಕ್ಕೆ ಬಿಜೆಪಿ ದೂರು

| Published : Apr 02 2024, 01:03 AM IST

ರಾಹುಲ್‌ ಮ್ಯಾಚ್‌ ಫಿಕ್ಸಿಂಗ್‌ ಹೇಳಿಕೆ ವಿರುದ್ಧ ಕ್ರಮ ಕೋರಿ ಆಯೋಗಕ್ಕೆ ಬಿಜೆಪಿ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್‌ ನಡೆಸಿದ್ದಾರೆ ಎಂಬ ಆರೋಪ ಮಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್‌ ನಡೆಸಿದ್ದಾರೆ ಎಂಬ ಆರೋಪ ಮಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ರಾಹುಲ್‌ ಮಾಡಿದ ಆರೋಪ ನೀತಿ ಸಂಹಿತೆ ಉಲ್ಲಂಘನೆ ಅಲ್ಲದೇ ಇರಬಹುದು. ಆದರೆ ಅದು ಗಂಭೀರ ಪರಿಣಾಮಗಳನ್ನು ಹೊಂದಿದೆ ಎಂದು ಕೇಂದ್ರ ಸಚಿವ ಹರದೀಪ್‌ ಸಿಂಗ್‌ ಪುರಿ ನೇತೃತ್ವ ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮನವಿನಲ್ಲಿ ಪ್ರಸ್ತಾಪಿಸಿದೆ.

ಭಾನುವಾರ ನವದೆಹಲಿಯಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಮಾತನಾಡಿದ್ದ ರಾಹುಲ್‌ ‘ಈ ಬಾರಿಯ ಚುನಾವಣೆ ಫಿಕ್ಸ್‌ ಆಗಿದೆ. ತಮಗೆ ಬೇಕಾದವರನ್ನೇ ಮೋದಿ ಅಧಿಕಾರಿಗಳಾಗಿ ನೇಮಿಸಿಕೊಂಡಿದ್ದಾರೆ. ಅಂಪೈರ್‌ಗಳನ್ನೂ ಫಿಕ್ಸ್‌ ಮಾಡಲಾಗಿದೆ. ಪಂದ್ಯಕ್ಕೂ ಮುನ್ನವೇ ನಮ್ಮ ಇಬ್ಬರು ಆಟಗಾರರನ್ನು ಬಂಧಿಸಲಾಗಿದೆ. ಇವಿಎಂ, ಮ್ಯಾಚ್‌ಫಿಕ್ಸಿಂಗ್‌ ಇಲ್ಲದೇ ಬಿಜೆಪಿ 180 ಸೀಟು ಕೂಡಾ ಗೆಲ್ಲಲಾಗದು ಎಂದಿದ್ದರು.