ಸಾರಾಂಶ
ಸಿಂಧಿಯಾ, ರಾಜೀವ್, ಮಾಂಡವೀಯ ಸೋನೋವಾಲ್ ಸೇರಿ ಹಲವು ರಾಜ್ಯಸಭಾ ಸದಸ್ಯರಾಗಿದ್ದವರಿಗೆ ಬಿಜೆಪಿ ಇದೇ ಮೊದಲ ಬಾರಿಗೆ ಲೋಕಸಭೆಗೆ ಟಿಕೆಟ್ ನೀಡಿದೆ.
ನವದೆಹಲಿ: ಬಿಜೆಪಿ ಪ್ರಕಟಿಸಿರುವ ತನ್ನ ಮೊದಲ ಪಟ್ಟಿಯಲ್ಲಿ ಹಲವು ರಾಜ್ಯಸಭಾ ಸದಸ್ಯರಿಗೆ ಸ್ಥಾನ ಕಲ್ಪಿಸಿದೆ. ಪ್ರಮುಖವಾಗಿ ತಿರುವನಂತಪುರ ಕ್ಷೇತ್ರದಿಂದ ರಾಜೀವ್ ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಆರೋಗ್ಯ ಸಚಿವ ಮನಸುಖ್ ಮಾಂಡವೀಯ, ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ, ಭೂಪೇಂದ್ರ ಯಾದವ್ ಮತ್ತು ಅಸ್ಸಾಂನ ಸರ್ಬಾನಂದ ಸೋನೊವಾಲ್ ಅವರಿಗೂ ಸಹ ಲೋಕಸಭಾ ಟಿಕೆಟ್ ನೀಡಲಾಗಿದೆ.