ಸಾರಾಂಶ
ಉತ್ತರಾಖಂಡದ ರೀತಿಯಲ್ಲೇ ಇತರ ಬಿಜೆಪಿ ಆಡಳಿತಾರೂಢ ರಾಜ್ಯಗಳಲ್ಲೂ ಎಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆಗೆ ಬಿಜೆಪಿ ಸಿದ್ದತೆ ನಡೆಸುತ್ತಿದೆ ಎನ್ನಲಾಗಿದೆ.
ನವದೆಹಲಿ: ಉತ್ತರಾಖಂಡ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಿದ ಬಳಿಕ, ಬಿಜೆಪಿ ಆಡಳಿತ ಇರುವ ಇತರೆ ಕೆಲ ರಾಜ್ಯಗಳು ಸಂಹಿತೆ ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ. ಉತ್ತರಾಖಂಡದ ರೀತಿಯಲ್ಲೇ ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ, ಗುಜರಾತ್, ಹರ್ಯಾಣ, ಮಧ್ಯಪ್ರದೇಶ ಹಾಗೂ ಅಸ್ಸಾಂ ರಾಜ್ಯಗಳು ಕೂಡಾ ಕಾಯ್ದೆ ಜಾರಿಗೆ ಆಸಕ್ತಿ ಹೊಂದಿವೆ.
ಇದಕ್ಕಾಗಿ ಸಮಿತಿ ರಚಿಸಿ ನಾಗರಿಕ ಸಂಹಿತೆಯ ಅಧ್ಯಯನಕ್ಕೆ ಈ ರಾಜ್ಯಗಳು ತಯಾರಿ ನಡೆಸಿವೆ.ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ ನಾಗರಿಕ ಸಂಹತೆಯನ್ನು ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಡ ಹೇರಿತ್ತು.
ಕರ್ನಾಟಕದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಸಂಹಿತೆ ಜಾರಿಗೆ ಆಸಕ್ತಿ ತೋರಿಸಿತ್ತು.