-ಯುವಕರ ತಲುಪಲು ರೀಲ್ಸ್ ಮಾಡಿ ಎಂದಿದ್ದ ಪ್ರಧಾನಿ
-ಈ ಬೆನ್ನಲ್ಲೇ ಸಚಿವರಿಂದ ಇನ್‌ಸ್ಟಾಗ್ರಾಂ ಬಳಕೆ ತೀವ್ರಪಿಟಿಐ ನವದೆಹಲಿಇನ್ಸ್ಟಾಗ್ರಾಂನಲ್ಲಿ ಹೆಚ್ಚೆಚ್ಚು ರೀಲ್ಸ್ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಹೋದ್ಯೋಗಿಗಳಿಗೆ ಕರೆ ನೀಡಿದ ಬೆನ್ನಲ್ಲೇ, ಬಿಜೆಪಿ ನಾಯಕರು ಇನ್‌ಸ್ಟಾಗ್ರಾಂ ಬಳಕೆಯನ್ನು ತೀವ್ರಗೊಳಿಸಿದ್ದಾರೆ. ಹಲವು ಕೇಂದ್ರ ಸಚಿವರು ಮತ್ತು ಪಕ್ಷದ ನಾಯಕರು ಇದನ್ನು ಪ್ರಮುಖ ರಾಜಕೀಯ ಸಂದೇಶ ಪ್ರಸಾರದ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ.
ನೂತನ ಶಿಕ್ಷಣ ಸಚಿವ ಪ್ರಹ್ಲಾದ ಜೋಶಿ, ನೀಟ್ ಪ್ರಕರಣಕ್ಕೆ ಸರ್ಕಾರದ ಪ್ರತಿಕ್ರಿಯೆಯನ್ನು ಇನ್‌ಸ್ಟಾದಲ್ಲಿ ವಿವರಿಸಿದ್ದಾರೆ. ಕೇಂದ್ರ ಸಚಿವ ಜೆ.ಪಿ. ನಡ್ಡಾ ಸಿಜೆಪಿ ಜತೆಗಿನ ಸಭೆಗಳ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಸಚಿವರಾದ ಜಿತೇಂದ್ರ ಸಿಂಗ್, ಕಿರಣ್ ರಿಜಿಜು, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್, ಅನ್ನಪೂರ್ಣಾ ದೇವಿ, ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಲ್ವಿಯಾ ಸಹ ಇನ್‌ಸ್ಟಾದಲ್ಲಿ ಅಧಿಕ ಪೋಸ್ಟ್‌ಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.ಮೇ ತಿಂಗಳಲ್ಲಿ ಆರಂಭವಾದ ಸಿಜೆಪಿ ಈಗ ಇನ್‌ಸ್ಟಾಗ್ರಾಂನಲ್ಲಿ 2.6 ಕೋಟಿ ಫಾಲೋವರ್‌ಗಳನ್ನು ಹೊಂದಿದೆ. ಪರೀಕ್ಷಾ ಸುಧಾರಣೆ ಬಗ್ಗೆ ಇತ್ತೀಚೆಗೆ ಮೋದಿ ಇನ್‌ಸ್ಟಾದಲ್ಲಿ ಸೆಲ್ಫಿ ವಿಡಿಯೋ ಹಂಚಿಕೊಂಡ ಬಳಿಕ ಅವರ ಫಾಲೋವರ್‌ಗಳ ಸಂಖ್ಯೆ ಸುಮಾರು 10 ಲಕ್ಷ ಏರಿಕೆಯಾಗಿ, 10.5 ಕೋಟಿಗೆ ತಲುಪಿದೆ. ಬಿಜೆಪಿಯ ಅಧಿಕೃತ ಖಾತೆಗೆ 95 ಫಾಲೋವರ್‌ಗಳಿದ್ದಾರೆ. ಹೀಗೆ ಯುವಕರ ನಡುವೆ ಇನ್‌ಸ್ಟಾ ಹೆಚ್ಚು ಪ್ರಭಾವಶಾಲಿ ಮಾಧ್ಯಮವಾಗಿರುವುದರಿಂದ ಅದರ ಬಳಕೆಯನ್ನು ಹೆಚ್ಚಿಸುವಂತೆ ಮೋದಿ ಸಲಹೆ ನೀಡಿದ್ದರು.