ಛತ್ತೀಸ್‌ಗಢ ಸರ್ಕಾರ ಆಯೋಜಿಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇಲ್ಲಿನ ಬಿಜೆಪಿ ಶಾಸಕ ದಿಪೇಶ್‌ ಸಾಹು ಕೂಡ ಮದುವೆಯಾಗಲಿದ್ದಾರೆ.

ರಾಯ್ಪುರ: ಛತ್ತೀಸ್‌ಗಢ ಸರ್ಕಾರ ಆಯೋಜಿಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇಲ್ಲಿನ ಬಿಜೆಪಿ ಶಾಸಕ ದಿಪೇಶ್‌ ಸಾಹು ಕೂಡ ಮದುವೆಯಾಗಲಿದ್ದಾರೆ.

ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯಡಿ ಭಾನುವಾರ ಈ ಮದುವೆ ನಡೆಯಲಿದ್ದು, ಇದೇ ಮೊದಲ ಬಾರಿಗೆ ಶಾಸಕರೊಬ್ಬರು ಇತರ 23 ಜೋಡಿಗಳ ಜತೆ ಮದುವೆಯಾಗಲಿದ್ದಾರೆ. ‘ಮದುವೆಗಳಲ್ಲಿ ಖರ್ಚಾಗುವ ಕೋಟ್ಯಂತರ ದುಂದುವೆಚ್ಚದ ಬದಲು ಸರಳತೆ ಸಂದೇಶ ಸಾರಲು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮಿತವ್ಯಯಕ್ಕೆ ಮನ್ನಣೆ ಕೊಟ್ಟು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ದಿಪೇಶ್ ಹೇಳಿಕೊಂಡಿದ್ದಾರೆ. ಈ ಮದುವೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿಷ್ಣು ದೇವ್‌ ಸಾಯಿ ಸೇರಿದಂತೆ ಸರ್ಕಾರದ ಪ್ರಮುಖರು ಭಾಗಿಯಾಗುವ ಸಾಧ್ಯತೆಯಿದೆ.