ರಾಹುಲ್ ವಿರುದ್ಧ ಹಕ್ಕುಚ್ಯುತಿ ಕೋರಿ ಸ್ಪೀಕರ್‌ಗೆ ಬಿಜೆಪಿ ಪತ್ರ

| Published : Feb 05 2025, 12:31 AM IST

ರಾಹುಲ್ ವಿರುದ್ಧ ಹಕ್ಕುಚ್ಯುತಿ ಕೋರಿ ಸ್ಪೀಕರ್‌ಗೆ ಬಿಜೆಪಿ ಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ - ಚೀನಾ ಗಡಿ ವಿಷಯ ಮತ್ತು ಮೋದಿ ಅಮೆರಿಕ ಭೇಟಿ ಕುರಿತು ನೀಡಿದ ಹೇಳಿಕೆ ವಿಷಯದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ವಿರುದ್ಧ ಹಕ್ಕುಚ್ಯುತಿ ನೋಟಿಸ್‌ ಜಾರಿಗೆ ಬಿಜೆಪಿ ಮನವಿ ಮಾಡಿದೆ. ಈ ಕುರಿತು ಬಿಜೆಪಿ ನಾಯಕ ನಿಶಿಕಾಂತ್‌ ದುಬೆ, ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾಗೆ ಪತ್ರ ಬರೆದಿದ್ದಾರೆ.

ನವದೆಹಲಿ: ಭಾರತ - ಚೀನಾ ಗಡಿ ವಿಷಯ ಮತ್ತು ಮೋದಿ ಅಮೆರಿಕ ಭೇಟಿ ಕುರಿತು ನೀಡಿದ ಹೇಳಿಕೆ ವಿಷಯದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ವಿರುದ್ಧ ಹಕ್ಕುಚ್ಯುತಿ ನೋಟಿಸ್‌ ಜಾರಿಗೆ ಬಿಜೆಪಿ ಮನವಿ ಮಾಡಿದೆ. ಈ ಕುರಿತು ಬಿಜೆಪಿ ನಾಯಕ ನಿಶಿಕಾಂತ್‌ ದುಬೆ, ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾಗೆ ಪತ್ರ ಬರೆದಿದ್ದಾರೆ.

‘ಕಾಂಗ್ರೆಸ್‌ ನಾಯಕರು ತಮ್ಮ ಆರೋಪಗಳನ್ನು ದೃಢೀಕರಿಸದೆ ಸುಳ್ಳು ಸುದ್ದಿಗಳನ್ನು ಹರಡಲು ತಮ್ಮ ಸಂದೀಯ ಹಕ್ಕುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ರೀತಿ ಹೇಳಿಕೆಗಳನ್ನು ನೀಡುವಾಗ ರಾಹುಲ್ ಐತಿಹಾಸಿಕ ಮತ್ತು ಮಹತ್ವದ ಸಂಗತಿಗಳನ್ನು ನಾಚಿಕೆಯಿಲ್ಲದೆ ತಿರುಚಿದ್ದಾರೆ. ನಮ್ಮ ದೇಶವನ್ನು ಅಪಹಾಸ್ಯ ಮಾಡುವ ಮತ್ತು ಗಣರಾಜ್ಯದ ಪ್ರತಿಷ್ಠೆಯನ್ನು ಕುಗ್ಗಿಸುವ ಪ್ರಯತ್ನವನ್ನೂ ಮಾಡಿದ್ದಾರೆ’ ಎಂದು ದುಬೆ ಹೇಳಿದ್ದು ರಾಹುಲ್ ಗಾಂಧಿ ವಿರುದ್ಧ ತನಿಖೆ ನಡೆಸುವಂತೆ ಪತ್ರದಲ್ಲಿ ಹೇಳಿದ್ದಾರೆ.

ಚೀನಾ ಭಾರತದ 4000 ಚದರಡಿ ಭೂಮಿ ಅತಿಕ್ರಮಿಸಿದೆ ಎಂದಿದ್ದ ರಾಹುಲ್‌, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಮಗೆ ಅಹ್ವಾನ ಪಡೆಯಲೆಂದೇ ಮೋದಿ ಜೈಶಂಕರ್‌ ಅವರನ್ನು ಕಳೆದ ಡಿಸೆಂಬರ್‌ನಲ್ಲಿ ಅಮೆರಿಕಕ್ಕೆ ಕಳುಹಿಸಿದ್ದರು ಎಂದಿದ್ದರು.