ಸಾರಾಂಶ
ನವದೆಹಲಿ: ಪಿಯೂಷ್ ಗೋಯಲ್, ನಿತಿನ್ ಗಡ್ಕರಿ, ಮನೋಹರ್ ಲಾಲ್ ಖಟ್ಟರ್ ಸೇರಿ ಹಲವು ಖ್ಯಾತನಾಮರ ಹೆಸರನ್ನು ಒಳಗೊಂಡ 72 ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ.
ಇದಕ್ಕೂ ಮೊದಲು 195 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತ್ತು. ಎರಡೂ ಪಟ್ಟಿ ಸೇರಿ ಬಿಜೆಪಿ 267 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದಂತಾಗಿದೆ. ಎರಡನೇ ಪಟ್ಟಿಯಲ್ಲಿ ಕರ್ನಾಟಕಕ್ಕೂ ಮಣೆ ಹಾಕಿದ್ದು, 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ.ಬಿಜೆಪಿ ಬಿಡುಗಡೆ ಮಾಡಿದ ಎರಡನೇ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್‌ಗೆ ಮುಂಬೈ ಉತ್ತರದ ಲೋಕಸಭೆ ಟಿಕೆಟ್ ನೀಡಿದೆ. ಅಲ್ಲದೆ ನಾಗಪುರ ಕ್ಷೇತ್ರದಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟಿಕೆಟ್ ಘೋಷಿಸಲಾಗಿದೆ. ಇನ್ನು ಪಟ್ಟಿಯಲ್ಲಿ ಕರ್ನಾಟಕದ ಬಸವರಾಜ ಬೊಮ್ಮಾಯಿ ಅವರನ್ನೂ ಒಳಗೊಂಡಂತೆ ಮೂವರೂ ಮಾಜಿ ಸಿಎಂಗಳಿಗೆ ಮಣೆ ಹಾಕಲಾಗಿದೆ. ಅದರಲ್ಲಿ ಪ್ರಮುಖವಾಗಿ ಇತ್ತಿಚೆಗೆ ಮುಖ್ಯಮಂತ್ರಿ ಸ್ಥಾನ ತೊರೆದಿದ್ದ ಮನೋಹರ್ ಲಾಲ್ ಖಟ್ಟರ್ ಮತ್ತು ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದ ತ್ರಿವೇಂದ್ರ ಸಿಂಗ್ ರಾವತ್‌ಗೂ ಟಿಕೆಟ್ ಪ್ರಕಟಿಸಲಾಗಿದೆ.
ಅಷ್ಟೇ ಅಲ್ಲದೆ ಕೇಂದ್ರ ಸಚಿವರಾದ ಅನುರಾಗ್ ಠಾಕೂರ್, ಪ್ರಹ್ಲಾದ್ ಜೋಶಿ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಜೊತೆಗೆ ಮಹಾರಾಷ್ಟ್ರದ ಬೀಡ್ ಕ್ಷೇತ್ರದಲ್ಲಿ ದಿವಂಗತ ಗೋಪಿನಾಥ್ ಮುಂಡೆ ಪುತ್ರಿ ಪಂಕಜಾಗೆ ಟಿಕೆಟ್ ನೀಡಲಾಗಿದೆ.10 ರಾಜ್ಯಗಳ 2ನೇ ಪಟ್ಟಿ:
ಬಿಜೆಪಿಯು ತನ್ನ ಎರಡನೇ ಪಟ್ಟಿಯಲ್ಲಿ 10 ರಾಜ್ಯ ಮತ್ತು 1 ಕೇಂದ್ರಾಡಳಿತ ಪ್ರದೇಶಕ್ಕೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ.ಅದರಲ್ಲಿ ದಾದ್ರಾ ನಗರ ಹವೇಲಿಯಿಂದ 1, ದೆಹಲಿಯ 2, ಗುಜರಾತ್‌ನ 7, ಹರ್ಯಾಣದ 6, ಹಿಮಾಚಲದ 2, ಕರ್ನಾಟಕದ 20, ಮಧ್ಯಪ್ರದೇಶದ 5, ಮಹಾರಾಷ್ಟ್ರದ 20, ತೆಲಂಗಾಣದ 6, ತ್ರಿಪುರಾದ 1 ಹಾಗೂ ಉತ್ತರಾಖಂಡದ 2 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ. ಟಿಕೆಟ್ ಪಡೆದ ಪ್ರಮುಖರು
ಅಭ್ಯರ್ಥಿ-ಕ್ಷೇತ್ರಮನೋಹರ್ ಲಾಲ್ ಖಟ್ಟರ್ - ಕರ್ನಾಲ್
ಅನುರಾಗ್ ಸಿಂಗ್ ಠಾಕೂರ್ - ಹಮೀರ್ಪುರ್ನಿತಿನ್ ಗಡ್ಕರಿ - ನಾಗಪುರ
ಪಿಯೂಷ್ ಗೋಯಲ್ - ಮುಂಬೈ ಉತ್ತರಪಂಕಜಾ ಮುಂಡೆ - ಬೀಡ್
ತ್ರಿವೇಂದ್ರ ಸಿಂಗ್ ರಾವತ್ - ಹರಿದ್ವಾರ