ಇಂದು ಆರ್ಟಿಕಲ್‌ 370 ಚಿತ್ರ ಬಿಡುಗಡೆ: ಬಿಜೆಪಿ ಪ್ರಚಾರ!

| Published : Feb 23 2024, 01:49 AM IST / Updated: Feb 23 2024, 08:33 AM IST

ಸಾರಾಂಶ

ಕೇರಳ ಸ್ಟೋರಿ, ಕಾಶ್ಮೀರ ಫೈಲ್ಸ್‌, ಉರಿ, ಬಳಿಕ ಮತ್ತೊಂದು ಚಿತ್ರಕ್ಕೆ ಬಿಜೆಪಿ ಪ್ರೋತ್ಸಾಹ ನೀಡುತ್ತಿದೆ.

ನವದೆಹಲಿ: ದ ಕೇರಳ ಸ್ಟೋರಿ, ದ ಕಾಶ್ಮೀರ ಫೈಲ್ಸ್‌, ಉರಿ ದ ಸರ್ಜಿಕಲ್‌ ಸ್ಟ್ರೈಕ್‌ ಸಿನಿಮಾಗಳ ಬಳಿಕ ರಾಷ್ಟ್ರೀಯತೆಯ ಭಾವನೆ ಹೊಂದಿರುವ ಮತ್ತೊಂದು ಚಿತ್ರವಾದ ‘ಆರ್ಟಿಕಲ್‌ 370’ ಶುಕ್ರವಾರ ಬಿಡುಗಡೆಗೆ ಸಜ್ಜಾಗಿದೆ. 

ಈ ಚಿತ್ರವನ್ನು ವೀಕ್ಷಿಸುವಂತೆ ಹಲವು ಬಿಜೆಪಿ ನಾಯಕರು ದೇಶವಾಸಿಗಳಿಗೆ ಕರೆ ನೀಡಿದ್ದಾರೆ.

ಯಾಮಿ ಗೌತಮ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಮಾದ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಹೊಗಳಿಕೆಯ ಮಾತುಗಳನ್ನಾಡಿದ್ದರು. 

ಕೆಲವು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ‘ಈ ವಾರ ಆರ್ಟಿಕಲ್‌ 370 ಸಿನಿಮಾ ಬಿಡುಗಡೆಯಾಗುತ್ತಿದೆ. 

ಈ ಮೂಲಕ ಜಮ್ಮು ಜನರ ಜೈಕಾರಗಳು ಇಡೀ ದೇಶದಲ್ಲಿ ಕೇಳಿಸಲಿದೆ’ ಎಂದು ಹೇಳಿದ್ದರು.

370ನೇ ವಿಧಿ ರದ್ದತಿಯ ಸಮಯದಲ್ಲಿ ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸ್ಥಳೀಯ ಏಜೆಂಟ್‌ ಪಾತ್ರದಲ್ಲಿ ಯಾಮಿ ಗೌತಮ್‌ ನಟಿಸಿದ್ದು, ಪ್ರಶಸ್ತಿ ವಿಜೇತ ನಿರ್ದೇಶಕ ಆದಿತ್ಯ ಸುಹಾತ್‌ ಜಂಭಾಲೆ ಇದನ್ನು ನಿರ್ದೇಶನ ಮಾಡಿದ್ದಾರೆ.