ಕೇಜ್ರಿವಾಲ್‌ ರಾಜೀನಾಮೆಗೆ ಬಿಜೆಪಿ ಆಗ್ರಹ

| Published : Mar 23 2024, 01:06 AM IST / Updated: Mar 23 2024, 12:37 PM IST

ಸಾರಾಂಶ

ಕೇಜ್ರಿವಾಲ್‌ ಮುಂದುವರಿಕೆ ಸಂವಿಧಾನಕ್ಕೆ ಅವಮಾನ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಕಿಡಿಕಾರಿದ್ದಾರೆ

ನವದೆಹಲಿ: ಬಂಧನ ಆದ ನಂತರವೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ನೀಡದೇ ಜೈಲಿನಿಂದ ಸರ್ಕಾರ ನಡೆಸುವುದು ಕಾನೂನು, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಜನರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಕೇಂದ್ರ ಸಚಿವ ಅನುರಾಗ್ ಠಾಕೂರ್ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಕೇಜ್ರಿವಾಲ್ ತಮ್ಮನ್ನು ಕಾನೂನಿಗಿಂತ ಹೆಚ್ಚು ಎಂದು ಪರಿಗಣಿಸುತ್ತಾರೆಯೇ, ಅವರು ಕೂಡಲೇ ಹುದ್ದೆ ಬಿಡಬೇಕು ಎಂದು ಕಿಡಿಕಾರಿದರು.

ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪ್ರತಿಕ್ರಿಯಿಸಿ, ಹಗರಣದ ವಿಷಯದಲ್ಲಿ ಎಎಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿರುವವರು ಜೈಲಿಗೆ ಹೋಗುತ್ತಾರೆ ಎಂದರು.

ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿಗೆ ನೀಡಿದ ಬೆಂಬಲವನ್ನು ಕಳ್ಳರ ನಡುವಿನ ಸಹೋದರತ್ವದ ಪ್ರದರ್ಶನ ಎಂದೂ ವ್ಯಂಗ್ಯವಾಡಿದರು.