ಬಿಜೆಪಿಗೆ ₹4340 ಕೋಟಿ, ಕೈಗೆ ₹1225 ಕೋಟಿ 2023-24ನೇ ಸಾಲಿನಲ್ಲಿ ಆದಾಯ: ಎಡಿಆರ್‌

| N/A | Published : Feb 18 2025, 12:31 AM IST / Updated: Feb 18 2025, 04:41 AM IST

ಸಾರಾಂಶ

2023-24ನೇ ಸಾಲಿನಲ್ಲಿ 4340 ಕೋಟಿ ರು. ಆದಾಯದೊಂದಿಗೆ ಭಾರತೀಯ ಜನತಾ ಪಕ್ಷ ಅತಿ ಹೆಚ್ಚು ದೇಣಿಗೆ ಸ್ವೀಕರಿಸಿದ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ಕಾಂಗ್ರೆಸ್‌ 1225 ಕೋಟಿ ರು.ನೊಂದಿಗೆ 2ನೇ ಸ್ಥಾನದಲ್ಲಿದೆ.

ನವದೆಹಲಿ: 2023-24ನೇ ಸಾಲಿನಲ್ಲಿ 4340 ಕೋಟಿ ರು. ಆದಾಯದೊಂದಿಗೆ ಭಾರತೀಯ ಜನತಾ ಪಕ್ಷ ಅತಿ ಹೆಚ್ಚು ದೇಣಿಗೆ ಸ್ವೀಕರಿಸಿದ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ಕಾಂಗ್ರೆಸ್‌ 1225 ಕೋಟಿ ರು.ನೊಂದಿಗೆ 2ನೇ ಸ್ಥಾನದಲ್ಲಿದೆ.

ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಬಿಡುಗಡೆ ಮಾಡಿರುವ ವರದಿ ಅನ್ವಯ, 2023-24ನೇ ಸಾಲಿನಲ್ಲಿ ಬಿಜೆಪಿ 4340 ಕೋಟಿ ರು. ಆದಾಯ ಸಂಗ್ರಹಿಸಿತ್ತು. ಇದು 6 ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದಲ್ಲಿ ಶೇ.74ರಷ್ಟು ಪಾಲು. ಇನ್ನು ಬಿಜೆಪಿ ತನ್ನ ಆದಾಯದಲ್ಲಿ ಶೇ. ಶೇ.50.96ರಷ್ಟು ಅಂದರೆ 2211 ಕೋಟಿ ರು.ಗಳನ್ನು ಚುನಾವಣೆಗೆ ಖರ್ಚು ಮಾಡಿದ್ದು, ಕಾಂಗ್ರೆಸ್‌ ತನ್ನ 1225 ಕೋಟಿ ರು. ಆದಾಯದಲ್ಲಿ ಶೇ.83.69ರಷ್ಟು ಅಂದರೆ 1025 ಕೋಟಿ ರು. ವೆಚ್ಚ ಮಾಡಿದೆ. ಈ ಆದಾಯಗಳ ಬಹುಪಾಲು ರದ್ದಾಗಿರುವ ಚುನಾವಣಾ ಬಾಂಡ್‌ನದ್ದೇ ಇದೆ ಎಂದು ಎಡಿಆರ್‌ ಹೇಳಿದೆ.