ಸಾರಾಂಶ
ದಿಲ್ಲಿ ರೀತಿ ರಷ್ಯಾದಿಂದಲೇ ಇ-ಮೇಲ್ ಕಳುಹಿಸಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಪ್ರಾರಂಭವಾಗಿದೆ.
ಅಹಮದಾಬಾದ್: ದೆಹಲಿಯಲ್ಲಿ 250 ಶಾಲೆಗಳಿಗೆ ಬಾಂಬ್ ಹಾಕುವ ಬೆದರಿಕೆ ಇ-ಮೇಲ್ ಬೆನ್ನಲ್ಲೇ ಅಹಮದಾಬಾದ್‌ನ 10 ಶಾಲೆಗಳಿಗೂ ಸೋಮವಾರ ಅಂಥದ್ದೇ ಬೆದರಿಕೆ ಬಂದಿದೆ.
ಆದರೆ ತಪಾಸಣೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಕ್ಕಿಲ್ಲ. ಹಾಗಾಗಿ ಇದೊಂದು ಹುಸಿ ಬೆದರಿಕೆ ಎಂದು ಪೊಲೀಸರು ಹೇಳಿದ್ದಾರೆ.
ದೆಹಲಿ ಶಾಲೆಗಳಿಗೆ ಬಂದ ಇ-ಮೇಲ್ ಮಾದರಿಯಲ್ಲಿಯೇ ಈ ಸಂದೇಶ ಇದ್ದು, ಇದೂ ಕೂಡ ವಿದೇಶದಿಂದ, ಅದರಲ್ಲೂ ವಿಶೇಷವಾಗಿ ರಷ್ಯಾದಿಂದ ಬಂದಿರಬಹುದು ಎಂದು ಶಂಕಿಸಿದ್ದಾರೆ.
ಬೆದರಿಕೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ, ಪೊಲೀಸರು, ಬಾಂಬ್ ನಿಷ್ಕ್ರೀಯ ದಳ ಮತ್ತು ಶ್ವಾನದಳ ಶಾಲೆಗಳಿಗೆ ಆಗಮಿಸಿ ತಪಾಸಣೆ ನಡೆಸಿವೆ.
ಆದರೆ ಶೋಧದ ವೇಳೆ ಪೊಲೀಸರಿಗೆ ಯಾವುದೇ ಸ್ಫೋಟಕಗಳು ಸಿಕ್ಕಿಲ್ಲ.
ಆದರೂ ಮುನ್ನೆಚ್ಚರಿಕೆ ಕ್ರಮವಾಗಿದೆ ಶಾಲೆಗಳಲ್ಲಿ ಬಿಗಿ ಭದ್ರತೆ ವಹಿಸಲಾಗಿದೆ.