ತೆಲಂಗಾಣ: ಭಾರೀ ಗಾಳಿಗೆ ಕಾಂಕ್ರೀಟ್‌ ಸೇತುವೆ ಕುಸಿತ!

| Published : Apr 24 2024, 02:22 AM IST

ಸಾರಾಂಶ

ನಿರ್ಮಾಣ ಹಂತದಲ್ಲಿದ್ದ ಕಾಂಕ್ರೀಟ್‌ ಸೇತುವೆಯೊಂದು ಹೈದರಾಬಾದ್‌ನಲ್ಲಿ ಭಾರೀ ಗಾಳಿಗೆ ಕುಸಿದು ಬಿದ್ದಿದೆ.

ಹೈದರಾಬಾದ್‌: ನಿರ್ಮಾಣ ಹಂತದಲ್ಲಿರುವ ಸಿಮೆಂಟ್‌ ಕಾಂಕ್ರೀಟ್‌ ಸೇತುವೆಯೊಂದು ಸೋಮವಾರ ತಡರಾತ್ರಿ ಬೀಸಿದ ಭಾರೀ ಗಾಳಿಗೆ ಕುಸಿದು ಬಿದ್ದ ವಿಚಿತ್ರ ಘಟನೆ ನಡೆದಿದೆ.ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ನಿರ್ಮಾಣದ ಹಂತದಲ್ಲಿರುವ ಸೇತುವೆ ಪ್ರದೇಶದಲ್ಲಿ ಭಾರಿ ಗಾಳಿ ಬೀಸಿದ ಕಾರಣ 100 ಅಡಿ ಅಂತರದ ಎರಡು ಪಿಲ್ಲರ್‌ಗಳ ನಡುವಿನ ಐದು ಕಾಂಕ್ರೀಟ್‌ ಗರ್ಡರ್‌ಗಳು ಕೆಳಕ್ಕೆ ಬಿದ್ದಿವೆ.

ಈ ಸೇತುವೆಯನ್ನು 8 ವರ್ಷದಿಂದದಲೂ ನಿರ್ಮಾಣ ಹಂತದಲ್ಲಿದ್ದು, ಸದ್ಯಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.2016 ರಲ್ಲಿ ಅಂದಿನ ತೆಲಂಗಾಣ ವಿಧಾನಸಭಾ ಸ್ಪೀಕರ್ ಎಸ್. ಮಧುಸೂಧನ ಚಾರಿ ಮತ್ತು ಸ್ಥಳೀಯ ಶಾಸಕ ಪುಟ್ಟ ಮಧು ಅವರು ಮನೇರ್ ನದಿಗೆ ಅಡ್ಡಲಾಗಿ ಸುಮಾರು ಒಂದು ಕಿಲೋಮೀಟರ್ ಸೇತುವೆಯನ್ನು ಉದ್ಘಾಟಿಸಿದ್ದರು. 49 ಕೋಟಿ ವೆಚ್ಚದ ಮಂಜೂರು ಮಾಡಲಾಗಿತ್ತು.

ಕಮೀಷನ್‌ ಒತ್ತಡ ಮತ್ತು ಸರ್ಕಾರದಿಂದ ಬರಬೇಕಿದ್ದ ಬಾಕಿ ಹಣದ ಕಾರಣ ಗುತ್ತಿಗೆದಾರರು ಒಂದರಿಂದ ಎರಡು ವರ್ಷ ವರ್ಷಗಳ ವರೆಗೆ ಕಾಮಾಗಾರಿಯನ್ನು ನಿಲ್ಲಿಸಲಾಗಿತ್ತು. ನಂತರ ಅದೇ ಗುತ್ತಿಗದಾರರೇ ಮತ್ತೆ 2021ರಲ್ಲಿ ಕಾಮಾಗಾರಿಯನ್ನು ಪುನರಾರಂಭ ಮಾಡಿದ್ದರು ಎಂದು ಇಲ್ಲಿನ ಸ್ಥಳೀಯರು ತಿಳಿಸಿದ್ದಾರೆ.