ಸಾರಾಂಶ
ತಿರುವನಂತಪುರ: ಕಳೆದ 20 ದಿನಗಳಿಂದ ಕೇರಳದ ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿರುವ ಬ್ರಿಟನ್‌ನ ಅತ್ಯಾಧುನಿಕ ಯುದ್ಧ ವಿಮಾನವನ್ನು ರಿಪೇರಿ ಮಾಡಲು ಶನಿವಾರ ಬ್ರಿಟನ್‌ನಿಂದ 40 ತಂತ್ರಜ್ಞರು ಆಗಮಿಸಲಿದ್ದಾರೆ. ಇವರು ಎಫ್-35 ಯುದ್ಧ ವಿಮಾನದ ಕಡೇ ಯತ್ನವನ್ನು ಮಾಡಲಿದ್ದಾರೆ. ಒಂದು ವೇಳೆ ಇದೂ ವಿಫಲವಾದರೆ, ವಿಮಾನದ ಬಿಡಿ ಭಾಗಗಳನ್ನು ಬೇರ್ಪಡಿಸಿ ಏರ್ ಲಿಫ್ಟ್ ಮಾಡಲಿದ್ದಾರೆ.
ಜೂ.14ರಂದು ಹಿಂದೂಮಹಾಸಾಗರದಲ್ಲಿ ಭಾರತೀಯ ಪಡೆಗಳೊಂದಿಗೆ ಜಂಟಿ ಸಮರಾಭ್ಯಾಸ ನಡೆಸಿ ಎಫ್-35ಬಿ ಬ್ರಿಟನ್‌ಗೆ ತೆರಳುವಾಗ ಇಂಧನ ಖಾಲಿ ಎಂದು ಹೇಳಿ ತಿರುವನಂತಪುರದಲ್ಲಿ ಇಳಿಸಿತ್ತು. ಆ ಬಳಿಕ ತಾಂತ್ರಿಕ ದೋಷಕ್ಕೊಳಗಾಗಿ ತಿರುವನಂತಪುರದಲ್ಲಿಯೇ ಉಳಿಯಬೇಕಾಯಿತು. ವಿಮಾನದ ತಂತ್ರಜ್ಞಾನ ಕಳವಾಗಬಹುದು ಎಂಬ ಭೀತಿಯಿಂದಾಗಿ ಭಾರತೀಯ ವಾಯುಪಡೆಯವರಿಂದ ರಿಪೇರಿಗೆ ಬ್ರಿಟನ್ ಒಲ್ಲೆಯೆಂದಿತ್ತು.
35 ಕೋಟಿ ಭಾರತೀಯರಿಗೆ ಗುಣಮಟ್ಟದ ಜೀವನವಿಲ್ಲ! : ವಿಶ್ವಬ್ಯಾಂಕ್
ನವದೆಹಲಿ: ಆರ್ಥಿಕಾಭಿವೃದ್ಧಿಯಲ್ಲಿ ಭಾರತ ನಾಗಾಲೋಟ ಸಾಧಿಸಿದ್ದರೂ, ಕಡುಬಡತನದ ಪ್ರಮಾಣ ಇಳಿದಿದ್ದರೂ ಈಗಲೂ ದೇಶದ ಪ್ರತಿ ನಾಲ್ವರಲ್ಲಿ ಒಬ್ಬರು ಅಂದರೆ 35 ಕೋಟಿ ಜನರು ಗುಣಮಟ್ಟದ ಜೀವನದಿಂದ ವಂಚಿತರಾಗಿ ಬದುಕುತ್ತಿದ್ದಾರೆ. ಪೌಷ್ಠಿಕ ಆಹಾರ, ಸುರಕ್ಷಿತ ಮನೆ, ಆರೋಗ್ಯ ಸೇವೆ ಮತ್ತು ಶಿಕ್ಷಣದಿಂದ ಇಷ್ಟುಜನರು ವಂಚಿತರಾಗಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.ಭಾರತದಲ್ಲಿ ಬಡತನ ಇಳಿದರೂ, ಗುಣಮಟ್ಟದ ಜೀವನದಲ್ಲಿ ಸುಧಾರಣೆಯಾಗಿಲ್ಲ. 2011ರಿಂದ ಭಾರತದಲ್ಲಿ ಬಡತನದ ಪರಿಸ್ಥಿತಿ ಸುಧಾರಿಸಿದ್ದು, ತಲಾವಾರು ಜಿಡಿಪಿ ಸೇರಿದಂತೆ ಬಹು ಆಯಾಮದಲ್ಲಿ ಬಡತನದಲ್ಲಿ ಇಳಿಕೆಯಾಗಿದೆ. ಶೇ.5ರಷ್ಟು ಮಂದಿ ಮಾತ್ರ ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ. 2013ರಲ್ಲಿ ಶೇ.29ರಷ್ಟು ಇದ್ದ ಕಡುಬಡತನ 2022ರಲ್ಲಿ ಶೇ.11.3ಕ್ಕೆ ಇಳಿದಿದೆ. ಈ ಅವಧಿಯಲ್ಲಿ 20 ಕೋಟಿ ಮಂದಿ ಬಡತನದಿಂದ ಮುಕ್ತರಾಗಿದ್ದಾರೆ ಎಂದಿದೆ.
ಇದರ ಹೊರತಾಗಿಯೂ ಬಡವ ಮತ್ತು ಶ್ರೀಮಂತರ ನಡುವೆ ವ್ಯತ್ಯಾಸಗಳಿವೆ ಎಂದಿರುವ ವಿಶ್ವ ಬ್ಯಾಂಕ್, ಗಿನಿ ಸೂಚ್ಯಂಕದ ಪ್ರಕಾರ, ಭಾರತದಲ್ಲಿ ಈ ಪ್ರಮಾಣ 2011ರಲ್ಲಿ ಶೇ.28.8ರಷ್ಟಿತ್ತು. ಆದರೆ 2022ರಲ್ಲಿ ಸ್ವಲ್ವ ಸುಧಾರಿಸಿದ್ದು ಶೇ.25.5ಕ್ಕೆ ಇಳಿದಿದೆ. ಶೇ.1ರಷ್ಟು ಶ್ರೀಮಂತರು ದೇಶದ ಸಂಪತ್ತಿನ ಶೇ40ರಷ್ಟು ಸಂಪತ್ತನ್ನು ನಿರ್ವಹಿಸುತ್ತಿದ್ದಾರೆ. ಕೆಳಗಿನ 50ರಷ್ಟು ಮಂದಿ ಶೇ.6.4ರಷ್ಟನ್ನು ಮಾತ್ರವೇ ಹೊಂದಿದ್ದಾರೆ’ ಎಂದಿದೆ.ವಿಶ್ವಬ್ಯಾಂಕ್ ಸಲಹೆಗಳೇನು?
ಗುಣಮಟ್ಟದ ಜೀವನಕ್ಕಿಂತ ಕೆಳಗಡೆ ವಾಸಿಸುವರನ್ನು ಕಡುಬಡತನದ ವರ್ಗಕ್ಕೆ ಸೇರಿಸಲು ಆಗದೇ ಇದ್ದರೂ ಕೂಡ ಅವರು ಪೌಷ್ಠಿಕ ಆಹಾರ, ಸುರಕ್ಷಿತ ವಸತಿ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದಂತಹ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ.ಗುಣಮಟ್ಟದ ಜೀವನ ನಡೆಸುತ್ತಿರುವ ಪ್ರಮಾಣದಲ್ಲಿ ಆಗುತ್ತಿರುವ ಈ ವ್ಯತ್ಯಾಸ ತಡೆಗೆ ವಿಶ್ವ ಬ್ಯಾಂಕ್ ಅನೇಕ ಸಲಹೆ ನೀಡಿದೆ. ಜಾಗತಿಕವಾಗಿ 250 ರು. ಹಣವನ್ನು ಗುಣಮಟ್ಟದ ಜೀವನದ ಮಟ್ಟ ಪ್ರಮಾಣ ಎಂದು ಗುರುತಿಸಲಾಗುತ್ತದೆ. ಆದರೆ ಭಾರತದಲ್ಲಿ ಆ ಪ್ರಮಾಣ ಶೇ.5ರಷ್ಟು ಮಾತ್ರವಿದೆ. ಆದರೆ ಭಾರತದಂತಹ ಮುಂದುವರೆಯುತ್ತಿರುವ ದೇಶದಲ್ಲಿ ಆ ಪ್ರಮಾಣ 350 ರು.ಗೆ ತಲುಪಬೇಕು ಎಂದು ವಿಶ್ವಬ್ಯಾಂಕ್ ಅಭಿಪ್ರಾಯ ಪಟ್ಟಿದೆ.
ಕಾರಣವೇನು?ಈ ಸಮಸ್ಯೆಗೆ ಕಾರಣಗಳನ್ನೂ ಕೂಡ ವಿಶ್ವ ಬ್ಯಾಂಕ್ ನೀಡಿದ್ದು, ನಗರದಲ್ಲಿ ಬಾಡಿಗೆ, ಸ್ಥಿರವಲ್ಲದ ಉದ್ಯೋಗ ಜನರ ಜೀವನ ಮಟ್ಟ ಕುಸಿಯಲು ಕಾರಣವಾಗಿದ್ದರೆ, ಗ್ರಾಮೀಣದಲ್ಲಿ ಭೂಮಿ ವಿಭಜನೆ, ಆದಾಯ ಅಸ್ಥಿರವೂ ಕಾರಣ. ಇದರ ಪರಿಣಾಮ ಒಂದು ವೇಳೆ ಆರೋಗ್ಯ ತುರ್ತು ಪರಿಸ್ಥಿತಿಗಳು ಉಂಟಾದಲ್ಲಿ ಬಿಕ್ಕಟ್ಟಿಗೆ ತಳ್ಳುತ್ತದೆ ಎಂದಿದೆ.