ಸಾರಾಂಶ
ಭೋಪಾಲ್: ದೇವರೂ ಕೂಡಾ ಗಂಡ- ಹೆಂಡತಿ ನಡುವೆ ಬರಲಾಗದು ಅಂಥಾರೆ. ಆದರೆ ಮಧ್ಯಪ್ರದೇಶದಲ್ಲಿ ಲೋಕಸಭಾ ಚುನಾವಣೆ ಒಂದಾಗಿದ್ದ ಗಂಡ- ಹೆಂಡತಿಯನ್ನು ದೂರ ಮಾಡಿದೆ.
ಚುನಾವಣೆ ಮುಗಿಯವವರೆಗೂ ಬೇರೆ ಬೇರೆ ರಾಜಕೀಯ ನಿಲುವು ಹೊಂದಿರುವ ನಾವು ಒಂದೇ ಮನೆಲ್ಲಿ ಇರುವುದು ಎಂದು ಬೇಡ ಎಂದು ಗಂಡ- ಹೆಂಡತಿ ದೂರಾಗಿದ್ದಾರೆ.ನಿಜ. ಅನುಭಾ ಮುಂಜಾರೆ ಸ್ಥಳೀಯ ಕಾಂಗ್ರೆಸ್ ಶಾಸಕಿ. ಆದರೆ ಪತಿ ಕಂಕರ್ ಮುಂಜಾರೆ ಬಾಲಾಘಾಟ್ ಕ್ಷೇತ್ರದಲ್ಲಿ ಬಿಎಸ್‌ಪಿ
ದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಚುನಾವಣೆಗೂ ಮುನ್ನ ಇಬ್ಬರೂ ಒಟ್ಟಿಗೆ ಒಂದೇ ಮನೆಯಲ್ಲೇ ವಾಸವಿದ್ದರು.ಆದರೆ ಚುನಾವಣೆ ವೇಳೆ ಬೇರೆ ಬೇರೆ ಸೈದ್ಧಾಂತಿಕ ನಿಲವು ಹೊಂದಿರುವವರು ಒಂದೇ ಮನೆಯಲ್ಲಿ ವಾಸ ಇರಬಾರದು ಎಂದು ಕಂಕರ್ ಮುಂಜಾರೆ ಶುಕ್ರವಾರ ತಮ್ಮ ಮನೆ ತೊರೆದು ಹೋಗಿದ್ದಾರೆ. ಏ.19ರಂದು ಮತದಾನ ಮುಗಿದ ಬಳಿಕ ಮನೆಗೆ ಮರಳುವುದಾಗಿ ಅವರು ಘೋಷಿಸಿದ್ದಾರೆ.ಆದರೆ ಪತಿ ನಿಲುವು ಪತ್ನಿ ಅನುಭಾಗೆ ಭಾರೀ ಬೇಸರ ತರಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಂಕರ್ ಬೇರೆ ಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದರು. ನಾನು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದೆ. ಆಗ ನಾವಿಬ್ಬರೂ ಒಂದೇ ಮನೆಯಲ್ಲಿ ಇದ್ದೆವು. ಆಗ ಇಲ್ಲದ ಸಿದ್ಧಾಂತ ಈಗೇಕೆ ಎಂದು ಮುನಿಸಿನಿಂದ ಪ್ರಶ್ನಿಸಿದ್ದಾರೆ.