ಸಾಮಾಜಿಕ ಮಾಧ್ಯಮಗಳಲ್ಲಿ ಗೀಳು ಅಂಟಿಸಿಕೊಂಡಿದ್ದ ಯೂಟ್ಯೂಬರ್ ಒಬ್ಬರಿಗೆ ತಮ್ಮ ಸಂಪತ್ತನ್ನು ಪ್ರದರ್ಶಿಸಿದ್ದೇ ಮುಳುವಾಗಿದೆ. ಇದನ್ನು ನೋಡಿದ ಕಳ್ಳರು ಆಕೆಯ ಮನೆಗೆ ಕನ್ನ ಹಾಕಿ 944 ಗ್ರಾಂ ಚಿನ್ನ ದೋಚಿದ ಘಟನೆ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್‌ನಲ್ಲಿ ನಡೆದಿದೆ.
- ವಿಡಿಯೋದಲ್ಲಿ ದಂಪತಿ ದುಡ್ಡು, ಆಭರಣ ಶೋ
- ಮನೆಗೆ ನುಗ್ಗಿ 944 ಗ್ರಾಂ ಚಿನ್ನ ಕದ್ದ ಚೋರರುಕನ್ಯಾಕುಮಾರಿ: ಸಾಮಾಜಿಕ ಮಾಧ್ಯಮಗಳಲ್ಲಿ ಗೀಳು ಅಂಟಿಸಿಕೊಂಡಿದ್ದ ಯೂಟ್ಯೂಬರ್ ಒಬ್ಬರಿಗೆ ತಮ್ಮ ಸಂಪತ್ತನ್ನು ಪ್ರದರ್ಶಿಸಿದ್ದೇ ಮುಳುವಾಗಿದೆ. ಇದನ್ನು ನೋಡಿದ ಕಳ್ಳರು ಆಕೆಯ ಮನೆಗೆ ಕನ್ನ ಹಾಕಿ 944 ಗ್ರಾಂ ಚಿನ್ನ ದೋಚಿದ ಘಟನೆ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್‌ನಲ್ಲಿ ನಡೆದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವಿನೋದ್ ಕುಮಾರ್ ಮತ್ತು ಅವರ ಪತ್ನಿ ಮಧುಮಿತಾ ವಿಡಿಯೋ ಶೇರ್ ಮಾಡಿ, ತಮ್ಮ ಚಿನ್ನಾಭರಣ ಹಾಗೂ ಅಪಾರ ಪ್ರಮಾಣದ ನಗದನ್ನು ಪ್ರದರ್ಶಿಸುತ್ತಿದ್ದರು. ಕಳೆದ ಮಂಗಳವಾರ ಇವರು ಅನ್ಯ ಊರಿಗೆ ತೆರಳಿದ್ದರು. ಆಗ ಕಳ್ಳರು ಹಿಂಬಾಗಿಲಿನ ಮೂಲಕ ಇವರ ಮನೆಗೆ ನುಗ್ಗಿ 944 ಗ್ರಾಂ ಚಿನ್ನ ಹಾಗೂ ನಗದನ್ನು ದೋಚಿದ್ದಾರೆ. ದಂಪತಿ ಮನೆಗೆ ಬಂದಾಗ ಕಳ್ಳತನ ಪತ್ತೆ ಆಗಿದೆ. ಇದರ ಬೆನ್ನಲ್ಲೇ ಸ್ಥಳಕ್ಕಾಗಮಿದ ಪೊಲೀಸರು ಸುತ್ತಲಿನ ಪ್ರದೇಶಗಳ ಸಿಸಿಟೀವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಜತೆಗೆ, ಸಂತ್ರಸ್ತ ದಂಪತಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಜಾಲಾಡಿ, ಅವರ ಮನೆಯಲ್ಲಿರುವ ಅಮೂಲ್ಯ ವಸ್ತುಗಳನ್ನು ಪ್ರದರ್ಶಿಸಿದ್ದನ್ನು ನೋಡಿಕೊಂಡೇ ಚೋರರು ಬಂದಿರಬಹುದು ಎಂದು ಶಂಕಿಸಿದ್ದಾರೆ.