ಸಾರಾಂಶ
ಬೆಂಕಿ ಹೊತ್ತಿಕೊಂಡ ಚಾಲಕನಿಲ್ಲದ ಕಾರೊಂದು ನಡುರಸ್ತೆಯಲ್ಲಿ ‘ಚಾಲಕ ರಹಿತವಾಗಿ’ ಚಲಿಸಿ ಜನರ ಆತಂಕಕ್ಕೆ ಕಾರಣವಾಗಿರುವ ಘಟನೆ ಜೈಪುರದ ಸೊಡಾಲಾ ತರಕಾರಿ ಮಾರುಕಟ್ಟೆ ಪ್ರದೇಶದ ಇಳಿಜಾರು ರಸ್ತೆಯಲ್ಲಿ ನಡೆದಿದೆ.
ಜೈಪುರ: ಬೆಂಕಿ ಹೊತ್ತಿಕೊಂಡ ಚಾಲಕನಿಲ್ಲದ ಕಾರೊಂದು ನಡುರಸ್ತೆಯಲ್ಲಿ ‘ಚಾಲಕ ರಹಿತವಾಗಿ’ ಚಲಿಸಿ ಜನರ ಆತಂಕಕ್ಕೆ ಕಾರಣವಾಗಿರುವ ಘಟನೆ ಜೈಪುರದ ಸೊಡಾಲಾ ತರಕಾರಿ ಮಾರುಕಟ್ಟೆ ಪ್ರದೇಶದ ಇಳಿಜಾರು ರಸ್ತೆಯಲ್ಲಿ ನಡೆದಿದೆ.
ಜಿತೇಂದರ್ ಎಂಬುವರು ಏರುರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಅದರ ಎಸಿ ಬಳಿ ಹೊಗೆ ಎದ್ದಿದ್ದು, ಬಾನೆಟ್‌ನಲ್ಲಿಯೂ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಅವರು ಕಾರಿನಿಂದ ಹೊರಬಂದಿದ್ದಾರೆ.
ಅದಾದ ಮೇಲೆಯೂ ಕಾರು ಚಲಿಸತೊಡಗಿದೆ. ಆಗ ಹೊತ್ತಿ ಉರಿವ ಕಾರು ನೋಡುತ್ತ ಅದರ ಎದುರು ನಿಂತಿದ್ದ ಜನ ಗಾಬರಿ ಆಗಿದ್ದಾರೆ. ಹೊಗೆಯನ್ನು ಉಗುಳುತ್ತ ಮನಸೋ ಇಚ್ಛೆ ತಮ್ಮ ಕಡೆ ಬರತೊಡಗಿದೆ ಯಮಸ್ವರೂಪಿ ಕಾರನ್ನು ಕಂಡ ಜನ ತಮ್ಮ ವಾಹನಗಳನ್ನು ಅಲ್ಲೇ ಬಿಟ್ಟು ಜೀವ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ. ಕೊನೆಗೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರು ನಿಂತಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.