ಸಾರಾಂಶ
ಆರ್ಥಿಕ ಸಂಕಷ್ಟದ ನಡುವೆಯೂ ಬೈಜೂಸ್ ತನ್ನ ಶೇ.25ರಷ್ಟು ನೌಕರರಿಗೆ ಮಾರ್ಚ್ ತಿಂಗಳ ವೇತನ ನೀಡುವಲ್ಲಿ ಯಶಸ್ವಿಯಾಗಿದೆ.
ನವದೆಹಲಿ: ಹಣಕಾಸಿನ ತೊಂದರೆಯಿಂದ ಬಳಲುತ್ತಿರುವ ಶಿಕ್ಷಣ ಕ್ಷೇತ್ರದ ಆ್ಯಪ್ ಬೈಜೂಸ್ ಕಂಪನಿ ತನ್ನ ನೌಕರರ ಪೈಕಿ ಶೇ.25ರಷ್ಟು ಮಂದಿಗೆ ಮಾತ್ರ ಪೂರ್ಣ ವೇತನ ಬಿಡುಗಡೆ ಮಾಡಿದೆ. ಈ ಪೈಕಿ ಕಡಿಮೆ ವೇತನ ಪಡೆವ ನೌಕರರಿಗೆ ಪೂರ್ಣ ವೇತನ ನೀಡಿದೆ. ಇದರೊಂದಿಗೆ ಉಳಿದ ನೌಕರರಿಗೆ ಅಲ್ಪ ಪ್ರಮಾಣದ ಸಂಬಳ ಪಾವತಿಸಿದೆ ಎಂದು ಮೂಲಗಳು ತಿಳಿಸಿವೆ.ಶುಕ್ರವಾರ ತನ್ನ ಉದ್ಯೋಗಿಗಳಿಗೆ ಬೈಜೂಸ್ ಆಡಳಿತ ಮಂಡಳಿ ಪತ್ರ ಬರೆದಿದೆ. ಕಡಿಮೆ ವೇತನ ಪಡೆವ ನೌಕರರಿಗೆ ಶುಕ್ರವಾರ ರಾತ್ರಿ ಸಂಬಳ ಬಿಡುಗಡೆ ಮಾಡಲಾಗಿದೆ. ಮಿಕ್ಕವರಿಗೆ ಸ್ವಲ್ಪ ಪ್ರಮಾಣದ ಹಣ ಹಾಕಿದ್ದೇವೆ. ಮುಂದೆ ಪೂರ್ತಿ ಸಂಬಳ ಪಾವತಿಸುತ್ತೇವೆ. ಹಣಕಾಸಿನ ಸಮಸ್ಯೆಯಿಂದಾಗಿ ಸಂಬಳ ಪಾವತಿಯಾಗಿರಲಿಲ್ಲ. ಕ್ಷಮೆ ಇರಲಿ’ ಎಂದು ಪತ್ರದಲ್ಲಿ ತಿಳಿಸಿದೆ.