ಕರ್ನಾಟಕದಲ್ಲಿ 53 ಸೇರಿದಂತೆ ದೇಶವ್ಯಾಪಿ 730 ಹೊಸ ಎಫ್‌ಎಂ ಚಾನೆಲ್‌ಗಳಿಗೆ ಅವಕಾಶ : ಕೇಂದ್ರ ಸರ್ಕಾರ

| Published : Aug 29 2024, 12:55 AM IST / Updated: Aug 29 2024, 04:51 AM IST

ಸಾರಾಂಶ

ಕರ್ನಾಟಕದಲ್ಲಿ 53 ಸೇರಿದಂತೆ ದೇಶವ್ಯಾಪಿ 730 ಹೊಸ ಎಫ್‌ಎಂ ಚಾನೆಲ್‌ಗಳಿಗೆ ಅವಕಾಶ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇ-ಹರಾಜು ಮೂಲಕ ಖಾಸಗಿ ಸಂಸ್ಥೆಗಳಿಗೆ ಎಫ್‌ಎಂ ಚಾನೆಲ್‌ ಅವಕಾಶ ಕಲ್ಪಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

 ನವದೆಹಲಿ: ಕರ್ನಾಟಕದಲ್ಲಿ 53 ಸೇರಿದಂತೆ ದೇಶವ್ಯಾಪಿ 730 ಹೊಸ ಎಫ್‌ಎಂ ಚಾನೆಲ್‌ಗಳಿಗೆ ಅವಕಾಶ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇ-ಹರಾಜು ಮೂಲಕ ಖಾಸಗಿ ಸಂಸ್ಥೆಗಳಿಗೆ ಎಫ್‌ಎಂ ಚಾನೆಲ್‌ ಅವಕಾಶ ಕಲ್ಪಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. 730 ಚಾನೆಲ್‌ಗಳಿಗೆ 784.87 ಕೋಟಿ ರು. ಮೂಲ ಬಿಡ್ಡಿಂಗ್‌ ಮೊತ್ತ ನಿಗದಿ ಮಾಡಲಾಗಿದೆ.

ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ ಬೆಟಗೇರಿ, ಹಾಸನ, ಹೊಸಪೇಟೆ, ಕೋಲಾರ, ರಾಯಚೂರು, ಶಿವಮೊಗ್ಗ, ತುಮಕೂರು, ಉಡುಪಿ ಸೇರಿ ಕರ್ನಾಟಕದ 16 ನಗರಗಳಲ್ಲಿ 53 ಚಾನೆಲ್‌ ಆರಂಭಿಸಲು ಅವಕಾಶ ಕಲ್ಪಿಸಲು ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಅದೇ ರೀತಿ ದೇಶವ್ಯಾಪಿ 234 ಹೊಸ ನಗರಗಳಲ್ಲಿ 730 ಚಾನೆಲ್‌ ಆರಂಭಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೊಸ ಎಫ್‌ಎಂ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಸ್ಥಳೀಯ ಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿ, ಉದ್ಯೋಗ ಸೃಷ್ಟಿಸಿ, ಸ್ಥಳೀಯ ಸಂಸ್ಕೃತಿಗೆ ಪ್ರೋತ್ಸಾಹ ಹಾಗೂ ವೋಕಲ್‌ ಫಾರ್‌ ಲೋಕಲ್‌ಗೆ ಬಲ ತುಂಬುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.

ಕರ್ನಾಟಕದಲ್ಲಿ ಎಲ್ಲೆಲ್ಲಿ ಎಫ್‌ಎಂಗಳು ಸ್ಥಾಪನೆ? ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ-ಬೆಟಗೇರಿ, ಹಾಸನ, ಹೊಸಪೇಟೆ, ಕೋಲಾರ, ರಾಯಚೂರು, ಶಿವಮೊಗ್ಗ, ತುಮಕೂರು, ಉಡುಪಿ.