ಪೇಟಿಎಂನಿಂದ ಬೇರೆಡೆಗೆ ವಹಿವಾಟು ಬದಲಿಸಿಕೊಳ್ಳಿ: ವರ್ತಕರ ಸಂಘದ ಸಲಹೆ

| Published : Feb 05 2024, 01:48 AM IST

ಪೇಟಿಎಂನಿಂದ ಬೇರೆಡೆಗೆ ವಹಿವಾಟು ಬದಲಿಸಿಕೊಳ್ಳಿ: ವರ್ತಕರ ಸಂಘದ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ್‌ ಜೋಡೋ ಯಾತ್ರೆಗೆ ನಮ್ಮನ್ನು ಕರೆದಿಲ್ಲ ಎಂದು ಅಖಿಲೇಶ್‌ ಆರೋಪಿಸಿದ್ದಾರೆ. ಅಲ್ಲದೆ ಅಸ್ಸಾಂನಲ್ಲಿ ಟಿಎಂಸಿ ಜತೆ ಮೈತ್ರಿ ಇಲ್ಲ ಎಂದು ರಾಜ್ಯ ಕಾಂಗ್ರೆಸ್‌ ಘೋಷಿಸಿದೆ.

ನವದೆಹಲಿ: ಭಾರತೀಯ ರಿಸರ್ವ ಬ್ಯಾಂಕ್‌ ಇದೇ ತಿಂಗಳಾಂತ್ಯದಿಂದ ಪೇಟಿಎಂ ಬ್ಯಾಂಕ್‌ನ ಮೇಲೆ ವಿವಿಧ ರೀತಿಯ ನಿರ್ಬಂಧ ವಹಿಸಿರುವ ಹಿನ್ನೆಲೆಯಲ್ಲಿ ಎಲ್ಲ ವರ್ತಕರು ಇತರ ಹಣಕಾಸು ಸಂಸ್ಥೆಗಳಿಗೆ ತಮ್ಮ ವಹಿವಾಟುಗಳನ್ನು ವರ್ಗಾಯಿಸಿಕೊಳ್ಳುವಂತೆ ಅಖಿಲ ಭಾರತ ವರ್ತಕರ ಒಕ್ಕೂಟವಾದ ಸಿಎಐಟಿ ಮನವಿ ಮಾಡಿದೆ.

ಈ ಕುರಿತು ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಪ್ರವೀಣ್‌ ಖಂಡೇಲ್‌ವಾಲ್‌, ‘ಪೇಟಿಎಂ ಸಂಸ್ಥೆಗೆ ನಿರ್ಬಂಧ ವಿಧಿಸಿರುವುದರಿಂದ ಅದರ ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯ ಕುರಿತು ಪ್ರಶ್ನೆಗಳು ಎದ್ದಿವೆ.

ಈ ಹಿನ್ನೆಲೆ ವರ್ತಕರು ಹಣದ ಸುರಕ್ಷತೆ ಮತ್ತು ಅನಿಯಮಿತವಾಗಿ ಹಣದ ವಹಿವಾಟು ಕೈಗೊಳ್ಳುವ ದೃಷ್ಟಿಯಿಂದ ಇತರ ನಂಬಿಕಸ್ಥ ಸಂಸ್ಥೆಗಳಿಗೆ ತಮ್ಮ ವ್ಯವಹಾರಗಳನ್ನು ವರ್ಗಾಯಿಸಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ಕೆವೈಸಿ ನಿಯಮಗಳ ಪಾಲಿಸದ ಹಿನ್ನೆಲೆಯಲ್ಲಿ ಪೇಟಿಎಂ ಬ್ಯಾಂಕ್‌ನ ಮೇಲೆ ಆರ್‌ಬಿಐ ನಿರ್ಬಂಧ ಹೇರಿದೆ.