ಕೋಲ್ಕತಾ ವೈದ್ಯೆ ರೇಪ್‌ ತನಿಖೆ ಸಿಬಿಐಗೆ

| Published : Aug 14 2024, 12:51 AM IST

ಸಾರಾಂಶ

ದೇಶಾದ್ಯಂತ ತಲ್ಲಣ ಮೂಡಿಸಿರುವ ಕೋಲ್ಕತಾ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.

ಪಿಟಿಐ ಕೋಲ್ಕತಾ

ದೇಶಾದ್ಯಂತ ತಲ್ಲಣ ಮೂಡಿಸಿರುವ ಕೋಲ್ಕತಾ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಆದೇಶಿಸಿದೆ. ಅಲ್ಲದೆ, ಕೋಲ್ಕತಾ ಪೊಲೀಸರ ತನಿಖಾ ವೈಖರಿ ಹಾಗೂ ಅತ್ಯಾಚಾರ ಸಂಭವಿಸಿದ ಕರ್ ಮೆಡಿಕಲ್‌ ಕಾಲೇಜು/ಆಸ್ಪತ್ರೆಯ ಪ್ರಾಚಾರ್ಯ ಸಂದೀಪ್‌ ಘೋಷ್‌ಗೆ ಚಾಟಿ ಬೀಸಿದೆ.ತನಿಖೆಯನ್ನು ಸಿಬಿಐಗೆ ವಹಿಸಬೇಕು ಅಥವಾ ಕೋರ್ಟ್‌ ಮೇಲ್ವಿಚಾರಣೆಯ ತನಿಖೆ ನಡೆಸಬೇಕು ಎಂಬ ಅರ್ಜಿಗಳ ಗುಚ್ಛದ ವಿಚಾರಣೆ ನಡೆಸಿದ ಪೀಠ, ‘ಮಂಗಳವಾರ ಸಂಜೆಯೊಳಗೆ ಕೇಸ್ ಡೈರಿಯನ್ನು ಕೇಂದ್ರ ತನಿಖಾ ಸಂಸ್ಥೆಗೆ ಕೋಲ್ಕತಾ ಪೊಲೀಸರು ಹಸ್ತಾಂತರಿಸಬೇಕು. ಬುಧವಾರ ಬೆಳಗ್ಗೆ 10 ಗಂಟೆಯೊಳಗೆ ಎಲ್ಲಾ ದಾಖಲೆಗಳನ್ನು ನೀಡಬೇಕು’ ಎಂದು ತಾಕೀತು ಮಾಡಿತು. ಅಲ್ಲದೆ, ತನಿಖೆಯನ್ನು ಬೇಗ ಬೇಗ ನಡೆಸಬೇಕು. ಇಲ್ಲದಿದ್ದರೆ ಸಾಕ್ಷ್ಯನಾಶದ ಸಾಧ್ಯತೆ ಇದೆ ಎಂದುಎ್ಚರಸಿತು.ಈವರೆಗಿನ ತನಿಖೆ ಬಗ್ಗೆ ಅತೃಪ್ತಿ:

ಈ ನಡುವೆ, ಕೋಲ್ಕತಾ ಪೊಲೀಸರ ತನಿಖಾ ವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪೀಠ, ‘ಮೊದಲು ಏಕೆ ಕೊಲೆ ಕೇಸು ದಾಖಲಿಸಲಿಲ್ಲ? ಅಸಹಜ ಕೇಸು ದಾಖಲಿಸಲಾಯಿತು? ವೈದ್ಯೆಯನ್ನು ಶವ ಬೀದಿಯಲ್ಲಿ ಸಿಕ್ಕಿರಲಿಲ್ಲ. ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸಿಕ್ಕಿತ್ತು. ಹೀಗಿದ್ದರೂ ಅದು ಕೊಲೆ ಎನಿಸಲಿಲ್ಲವೆ?’ ಎಂದು ಕಿಡಿಕಾರಿತು.ಅಕ್ಕದೆ, ಘಟನೆ ಸಂಭವಿಸಿದ ಆರ್‌ಜಿ ಕರ್ ಕಾಲೇಜು ಪ್ರಾಚಾರ್ಯ ಸಂದೀಪ್‌ ಘೋಷ್‌ಗೆ ಚಾಟಿ ಬೀಸಿದ ಪೀಠ, ‘ಘಟನೆ ಬಗ್ಗೆ ಘೋಷ್‌ ಏಕೆ ದೂರು ನೀಡಲಿಲ್ಲ? ಅವರ ಹೇಳಿಕೆಯನ್ನು ಪೊಲೀಸರು ಏಕೆ ಪಡೆಯಲಿಲ್ಲ? ಅವರು ನಿನ್ನೆ ಪ್ರಿನ್ಸಿಪಾಲ್‌ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ ಮರುಕ್ಷಣವೇ ಇನ್ನೊಂದು ಕಾಲೇಜಿಗೆ ನೇಮಿಸಲಾಗಿದೆ. ಇದು ಸರಿಯೇ?’ ಎಂದಿತು ಹಾಗೂ ಘೋಷ್‌ ಹೊಸ ಹುದ್ದೆ ವಹಿಸಿಕೊಳ್ಳದೇ ರಜೆ ಮೇಲೆ ತೆರಳಲು ತಾಕೀತು ಮಾಡಿತು.ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಸ್ಥಿತಿಯಲ್ಲಿ ಕಳೆದ ಶುಕ್ರವಾರ ವೈದ್ಯೆಯ ಶವ ಪತ್ತೆಯಾಗಿತ್ತು. ಈ ಸಂಬಂಧ ನಾಗರಿಕ ಪೊಲೀಸ್‌ ಸ್ವಯಂಸೇವಕನನ್ನು ಶನಿವಾರ ಬಂಧಿಸಲಾಗಿತ್ತು. ಪ್ರಕರಣದಲ್ಲಿ ಇನ್ನುಳಿದವರ ಪಾತ್ರದ ಬಗ್ಗೆ ತನಿಖೆ ನಡೆದಿದೆ. ಪೊಲೀಸರು 1 ವಾರದಲ್ಲಿ ತನಿಖೆ ಮುಗಿಸದಿದ್ದರೆ ಸಿಬಿಐಗೆ ಪ್ರಕರಣ ವಹಿಸುವುದಾಗಿ ಸೋಮವಾರ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು.

==

ವೈದ್ಯಕೀಯ ಕಾಲೇಜಲ್ಲಿ ಸುರಕ್ಷತಾ ಕ್ರಮಕ್ಕೆ ಮಾರ್ಗಸೂಚಿ

ನವದೆಹಲಿ: ಕೋಲ್ಕತಾಲ್ಲಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಕಾರಣ ಆಸ್ಪತ್ರೆಯಲ್ಲಿ ಉತ್ತಮ ಭದ್ರತಾ ಕ್ರಮ ಕೈಗೊಲ್ಳಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗವು ವೈದ್ಯಕೀಯ ಕಾಲೇಜುಗಳಿಗೆ ಸಲಹಾವಳಿ ಬಿಡುಗಡೆ ಮಾಡಿದೆ.ಕಾರಿಡಾರ್‌ಗಳು ಮತ್ತು ಕ್ಯಾಂಪಸ್‌ನಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಇರಬೇಕು. ಸಿಸಿಟಿವಿ ಮಾನಿಟರಿಂಗ್ ಅಗತ್ಯ. ಒಪಿಡಿ, ವಾರ್ಡ್‌ಗಳು, ಕ್ವಾರ್ಟರ್ಸ್‌ಗಳು ಮತ್ತು ಹಾಸ್ಟೆಲ್‌ಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಂಡು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅದು ತಾಕೀತು ಮಾಡಿದೆ.

==

2ನೇ ದಿನವೂ ವೈದ್ಯರ ಪ್ರತಿಭಟನೆ: ವೈದ್ಯಕೀಯ ಸೇವೆ ಅಡಚಣೆ

ಕೋಲ್ಕತಾ/ನವದೆಹಲಿ: ಕೋಲ್ಕತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ವೈದ್ಯರ ಪ್ರತಿಭಟನೆ ಮಂಗಳವಾರವೂ ಮುಂದುವರೆದಿದೆ. ಇದರಿಂದಾಗಿ ಕೋಲ್ಕತಾ, ದೆಹಲಿ, ಜೈಪುರ, ಮುಂಬೈ ಸೇರಿದಂತೆ ದೇಶದ ಹಲವು ನಗರಗಳಲ್ಲಿ ವೈದ್ಯಕೀಯ ಸೇವಗಳು ಸ್ಥಗಿತವಾಗಿದ್ದವು. ಇದರಿಂದ ರೋಗಿಗಳು ಪರದಾಡಿದರು.‘ರಾತ್ರಿಯಿಡೀ ಆಸ್ಪತ್ರೆಯಲ್ಲೇ ಕಳೆದರೂ ಚಿಕಿತ್ಸೆ ಸಿಗದೆ ಮತ್ತೆಂದಾದರೂ ಬರುವಂತೆ ಸೂಚಿಸಲಾಗಿದೆ’ ಎಂದು ಜನ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ವೈದ್ಯರಿಲ್ಲದ ಸರ್ಕಾರಿ ಆಸ್ಪತ್ರೆಗಳ ಎದುರು ರೋಗಿಗಳ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಅತ್ಯಾಚಾರ ಪ್ರಕರಣದ ಸಂಬಂಧ ತನಿಖೆ ನಡೆಸಿ, ಘಟನೆ ನಡೆದ ಕರ್‌ ಆಸ್ಪತ್ರೆ ಅಧಿಕಾರಿಗಳನ್ನು ವಜಾ ಮಾಡಬೇಕು. ವೈದ್ಯ ಸಿಬ್ಬಂದಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.==

2 ದಿನಗಳ ದೇಶವ್ಯಾಪಿ ವೈದ್ಯರ ಮುಷ್ಕರ ಅಂತ್ಯ

ನವದೆಹಲಿ: ಕೋಲ್ಕತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ 2ದಿನ​ಗ​ಳಿಂದ ನಡೆ​ಯು​ತ್ತಿದ್ದ ವೈದ್ಯರ ಪ್ರತಿಭಟನೆ ಮಂಗ​ಳ​ವಾರ ರಾತ್ರಿ ಅಂತ್ಯ​ಗೊಂಡಿ​ದೆ. ಸ್ಥಾ​ನಿಕ ವೈದ್ಯರ ಸಂಸ್ಥೆಯು ವೈದ್ಯರ ರಕ್ಷ​ಣೆಗೆ ಅಗತ್ಯ ಕ್ರಮ ಜರು​ಗಿ​ಸ​ಬೇಕು ಎಂದು ಆಗ್ರ​ಹಿಸಿ ದೇಶ​ವ್ಯಾಪಿ ಮುಷ್ಕ​ರಕ್ಕೆ ಕರೆ ನೀಡಿತ್ತು. ಈ ನಡುವೆ ತಮ್ಮ ಬೇಡಿ​ಕೆ​ಗಳ ಬಗ್ಗೆ ಮಂಗ​ಳ​ವಾರ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವ​ರನ್ನು ಭೇಟಿ ಮಾಡಿ ಮನವಿ ಸಲ್ಲಿ​ಸಿತು. ಈ ವೇಳೆ ನಡ್ಡಾ ಅವರು ವೈದ್ಯರ ಸುರ​ಕ್ಷ​ತೆಗೆ ಸಕಲ ಕ್ರಮ ಜರು​ಗಿ​ಸುವ ಭರ​ವಸೆ ನೀಡಿ​ದರು. ಹೀಗಾಗಿ ಮುಷ್ಕರ ಹಿಂಡೆ​ಯ​ಲಾ​ಗಿ​ದೆ ಎಂದು ಸಂಘ​ಟನೆ ಹೇಳಿ​ದೆ.ಮುಷ್ಕರ ಹಿಂತೆ​ಗೆ​ದಕ್ಕೆ ಹೈಕೋರ್‌್ಟಮನ​ವಿ: ಇದಕ್ಕೂ ಮುನ್ನ ಮುಷ್ಕರ ನಡೆಸುತ್ತಿರುವ ವೈದ್ಯ ರಿಗೆ ಪ್ರತಿ​ಭ​ಟನೆ ನಿಲ್ಲಿ​ಸಲು ಕಲ್ಕತ್ತಾ ಹೈಕೋರ್ಚ್‌ ಮಂಗ​ಳ​ವಾರ ಮಧ್ಯಾಹ್ನ ಮನವಿ ಮಾಡಿ​ತ್ತು.