ಸಾರಾಂಶ
ಪಶ್ಮಿಮ ಬಂಗಾಳ ರಾಜ್ಯಪಾಲ ಆನಂದ್ ಬೋಸ್ ವಿರುದ್ಧ ಮಾನಹಾನಿಕರ ಅಥವಾ ತಪ್ಪಾದ ಹೇಳಿಕೆ ನೀಡದಂತೆ ಕಲ್ಕತ್ತಾ ಹೈಕೋರ್ಟ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ನಾಯಕರಿಗೆ ಮಂಗಳವಾರ ಸೂಚನೆ ನೀಡಿದೆ.
ಕೋಲ್ಕತಾ: ಪಶ್ಮಿಮ ಬಂಗಾಳ ರಾಜ್ಯಪಾಲ ಆನಂದ್ ಬೋಸ್ ವಿರುದ್ಧ ಮಾನಹಾನಿಕರ ಅಥವಾ ತಪ್ಪಾದ ಹೇಳಿಕೆ ನೀಡದಂತೆ ಕಲ್ಕತ್ತಾ ಹೈಕೋರ್ಟ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ನಾಯಕರಿಗೆ ಮಂಗಳವಾರ ಸೂಚನೆ ನೀಡಿದೆ.
ಮಮತಾ ವಿರುದ್ಧ ಬೋಸ್ ಹಾಕಿದ್ದ ಮಾನಹಾನಿ ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ, ಸಾಂವಿಧಾನಿಕ ಹುದ್ದೆಯಲ್ಲಿರುವ ಕಾರಣ ಬೋಸ್ ಅವರ ವಿರುದ್ಧ ಆ.14ರ ವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾನಹಾನಿಕರ ಹೇಳಿಕೆಗಳನ್ನು ಕೊಡಬಾರದು ಎಂದು ಮಧ್ಯಂತರ ಆದೇಶ ನೀಡಿತು.‘ವಾಕ್ ಸ್ವಾತಂತ್ರ್ಯ ಇದೆಯೆಂದ ಮಾತ್ರಕ್ಕೆ ಒಬ್ಬರ ಘನತೆಗೆ ಧಕ್ಕೆ ತರುವಂತಹ ಮಾನಹಾನಿಕರ ಹೇಳಿಕೆ ಕೊಡುವುದು ತರವಲ್ಲ. ಹೀಗಿರುವಾಗ ಮಧ್ಯಂತರ ಆದೇಶ ನೀಡದಿದ್ದರೆ ವಾದಿ (ರಾಜ್ಯಪಾಲರು) ವಿರುದ್ಧ ಮನಸೋಇಚ್ಛೆ ಹೇಳಿಕೆ ಕೊಡಲು ಅವಕಾಶ ಕೊಟ್ಟಂತೆ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ರಾಜಭವನದಲ್ಲಿ ರಾಜ್ಯಪಾಲರು ತನಗೆ ಕಿರುಕುಳ ಕೊಟ್ಟಿದ್ದಾರೆ ಎಂದು ಮಹಿಳಾ ಸಿಬ್ಬಂದಿಯೊಬ್ಬರು ಆರೋಪಿಸಿದ ಬೆನ್ನಲ್ಲೇ ‘ಈ ಘಟನಾನಂತರ ರಾಜಭವನ ಪ್ರವೇಶಿಸಲು ಮಹಿಳೆಯರು ಹೆದರುತ್ತಿದ್ದಾರೆ’ ಎಂದು ಜು.27ರಂದು ರಾಜ್ಯ ಕಾರ್ಯದರ್ಶಿ ಕಚೇರಿಯಲ್ಲಿ ನಡೆದ ಆಡಳಿತ ಸಭೆಯಲ್ಲಿ ಬ್ಯಾನರ್ಜಿ ಹೇಳಿದ್ದರು. ಇದರ ವಿರುದ್ಧ ಬೋಸ್ ಮಾನಹಾನಿ ದಾವೆ ದಾಖಲಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))